ವೃತ್ತಿಯಲ್ಲಿ ಪ್ರೋಫೆಸರ್ ಆಗಿರುವ ಮಹಮದ್ (40) ಎಂಬಾತರು ಅತ್ಯಧಿಕ ಹಣಗಳಿಸುವ ಆಸೆಗೆ ಬಿದ್ದು ತಮ್ಮ ದುಡಿಮೆಯ ಹಣವನ್ನು ಕಳೆದುಕೊಂಡಿದ್ದಾರೆ!
ಜೊಯಿಡಾ ಗೌಳಿವಾಡದ ಸಹಾಯಕ ಪ್ರಾಧ್ಯಾಪಕರಾಗಿರುವ ಮಹಮದ್ ಮೂಲತಃ ಮೈಸೂರಿನವರು. ಜುಲೈ 2ರಂದು ಫೇಸ್ಬುಕ್ ಜಾಹೀರಾತು ನಂಬಿದ ಅವರು ವಾಟ್ಸಪ್ ಮೂಲಕ ಇಬ್ಬರನ್ನು ಪರಿಚಯಿಸಿಕೊಂಡಿದ್ದು, ಅವರ ಮೂಲಕ ಆಫ್ ಬಳಸಿ ಶೇರು ಮಾರುಕಟ್ಟೆಯಲ್ಲಿ ಹಣ ಹೂಡಿದ್ದರು. ಆನ್‌ಲೈನ್ ಮೂಲಕ ಪರಿಚಯ ಆದವರು ಶೇರು ಮಾರುಕಟ್ಟೆ ಬಗ್ಗೆ ಅವರಿಗೆ ನಿರಂತರ ಮಾಹಿತಿ ನೀಡುತ್ತಿದ್ದು, ಅವರು ಹೇಳಿದ ಕಡೆ ಇವರು ಹೂಡಿಕೆ ಮಾಡುತ್ತಿದ್ದರು. ಮೊದಲ ಎರಡು ದಿನ ಹೂಡಿದ ಹಣಕ್ಕೆ ಶೇ 6ರಷ್ಟು ಲಾಭ ಪಡೆದಿದ್ದರು. ಇದೇ ರೀತಿ ಮುಂದುವರೆಯುವ ಉದ್ದೇಶದಿಂದ ಇನ್ನಷ್ಟು ಹಣ ಹೂಡಿಕೆ ಮಾಡಿದಾಗಲೂ ಅತ್ಯಧಿಕ ಲಾಭ ದೊರೆಯಿತು.
ಇದಾದ ನಂತರ ವಂಚಕರು ಹೆಚ್ಚಿನ ಹಣ ಹೂಡಿಕೆ ಮಾಡಿದಲ್ಲಿ ಹೆಚ್ಚು ಲಾಭ ಸಿಗುತ್ತದೆ ಎಂದು ನಂಬಿಸಿ, ಅವರ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡುವಂತೆ ತಿಳಿಸಿದ್ದರು. ಇದನ್ನು ನಂಬಿದ ಮಹಮದ್ ಹಂತ ಹಂತವಾಗಿ 89 ಲಕ್ಷ ರೂ ಮೊತ್ತವನ್ನು ಅವರ ಖಾತೆಗೆ ವರ್ಗಾಯಿಸಿ, ಮೋಸ ಹೋಗಿದ್ದಾರೆ.




Discussion about this post