`ಬಿಜೆಪಿ ಹಾಗೂ ಜೆಡಿಎಸ್ ವಿಧಾನಸಭಾ ಚುನಾವಣೆ ಅವಧಿಯಲ್ಲಿಯೇ ಮೈತ್ರಿ ಆಗಿದ್ದರೆ ರಾಜ್ಯದಲ್ಲಿನ ಫಲಿತಾಂಶವೇ ಬೇರೆ ಆಗಿರುತ್ತಿತ್ತು’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.
ಕುಮಟಾದಲ್ಲಿ ಮಾತನಾಡಿದ ಅವರು `ಬಿಜೆಪಿ ಕಾರ್ಯಕರ್ತರು ಜೆಡಿಎಸ್ ಪಕ್ಷದವರನ್ನು ಸಹೋದರರಂತೆ ಕಾಣುತ್ತಿದ್ದಾರೆ. ಜೆಜೆಪಿಯವರು ಮೈತ್ರಿ ಪಕ್ಷದೊಂದಿಗೆ ಹಾಲು ಸಕ್ಕರೆಯಂತೆ ಸೇರಿ ಕೆಲಸ ಮಾಡಿದ್ದಾರೆ. ಇದರ ಪರಿಣಾಮವಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ದಾಖಲೆ ಬರೆದಿದ್ದು, ಈ ಮೈತ್ರಿ ಹಿಂದಿನ ವಿಧಾನ ಸಭೆಗೆ ಆಗಿದ್ದರೆ ಅದರ ಚಿತ್ರಣವೇ ಬೇರೆ ಇರುತ್ತಿತ್ತು’ ಎಂದರು.
Discussion about this post