ಯಲ್ಲಾಪುರ: ಪಟ್ಟಣದ ಬಿಲಾಲ್ ಮಸೀದಿ ಎದುರು ಗಾಂಜಾ ಸೇದುತ್ತಿದ್ದ 22 ವರ್ಷದ ತೌಫಿಕ್ ರಫೀಕ್ ಶೇಖ್ ಎಂಬಾತನ ಮೇಲೆ ಪಿಸೈ ಶ್ಯಾಮ್ ಪಾವಸ್ಕರ್ ದಾಳಿ ನಡೆಸಿದ್ದು, ವೈದ್ಯಕೀಯ ಪರೀಕ್ಷೆಯಲ್ಲಿ ಈತ ಗಾಂಜಾ ಸೇವಿಸಿದ್ದು ದೃಢಪಟ್ಟಿದೆ.
ಶಾರದಾಗಲ್ಲಿಯ ತೌಫಿಕ್ ರಫೀಕ್ ಶೇಖ್ ಜುಲೈ 10ರಂದು ಮಸಿದಿ ಎದುರು ಗಾಂಜಾ ಸೇದಿ ಹೊಗೆ ಬಿಡುತ್ತಿದ್ದ. ಅನುಮಾನಗೊಂಡ ಪೊಲೀಸರು ಆತನನ್ನು ವಿಚಾರಿಸಿದ್ದರು. `ತಾನು ಗಾಂಜಾ ಸೇದಿಯೇ ಇಲ್ಲ’ ಎಂದು ಆತ ವಾದಿಸಿದ್ದ. ಹೀಗಾಗಿ ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು. ಇದೀಗ ಅದರ ವರದಿಯಲ್ಲಿ `ಪಾಸಿಟಿವ್’ ಎಂದು ಬಂದಿದ್ದು ಆತ ಗಾಂಜಾ ಸೇದಿರುವುದು ದೃಢವಾಗಿದೆ. ಹೀಗಾಗಿ ತನಿಖಾಧಿಕಾರಿ ರೇಣುಕಾ ಬೆಳಗಟ್ಟಿ ಮುಂದಿನ ನ್ಯಾಯಾಲಯಕ್ಕೆ ದೋಷಾರೋಪಣಪಟ್ಟಿ ಸಲ್ಲಿಸಲು ಸಿದ್ಧವಾಗಿದ್ದಾರೆ.
Discussion about this post