ಉತ್ತರ ಕನ್ನಡ ಜಿಲ್ಲೆಯಲ್ಲಿ ಅಧಿಕಾರಿಗಳ ವರ್ಗಾವಣೆ ಪರ್ವ ಮುಂದುವರೆದಿದ್ದು, ಇದೀಗ ಪಿಸೈ ವರ್ಗಾವಣೆ ನಡೆಯುತ್ತಿದೆ.
ಜಿಲ್ಲೆಯ ಹಲವು ಪೊಲೀಸ್ ಠಾಣೆಯ ಪಿಸೈ ವರ್ಗಾವಣೆಯಾಗಿದ್ದು, ಇದರ ಆದೇಶ ಶೀಘ್ರದಲ್ಲಿಯೇ ಸಂಬoಧಿಸಿದ ಠಾಣೆಗಳಿಗೆ ಬರಲಿದೆ. ಒಳ್ಳೆಯ ಠಾಣೆ ಆಯ್ಕೆಗೆ ಪೊಲೀಸರ ನಡುವೆ ಪೈಪೋಟಿ ನಡೆದಿದ್ದರೂ ಹೇಳುವಷ್ಟರ ಮಟ್ಟಿಗೆ ಅದು ಫಲ ಕೊಟ್ಟಿಲ್ಲ.
ಕುಮಟಾ ಪೊಲೀಸ್ ಠಾಣೆಯಲ್ಲಿದ್ದ ಸುನೀಲ ಬಂಡಿವಡ್ಡರ್ ಕುಮಟಾ ತನಿಖಾ ವಿಭಾಗದಿಂದ ಕಾರವಾರದ ಕದ್ರಾ ಪೊಲೀಸ್ ಠಾಣೆಗೆ ವರ್ಗವಾಗಿದ್ದಾರೆ. ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿದ್ದ ಮಯೂರ ಪಟ್ಟಣಶೆಟ್ಟಿ ಕುಮಟಾ ಪೊಲೀಸ್ ಠಾಣೆಯ ತನಿಖಾ ಪಿಸೈ ಆಗಿದ್ದಾರೆ. ಪುತ್ತೂರಿನಲ್ಲಿದ್ದ ಶಾಂತಿನಾಥ ವಾಸನೆ ಸಿದ್ದಾಪುರದ ಕಾನೂನು ಸುವ್ಯವಸ್ಥೆಯ ಹೊಣೆ ಹೊತ್ತಿದ್ದಾರೆ. ಮಂಗಳೂರು ಐಜಿ ಕಚೇರಿಯಲ್ಲಿದ್ದ ಎಲ್ಲಾಲಿಂಗ ಕನ್ನೂರು ಬನವಾಸಿ ಪೊಲೀಸ್ ಠಾಣೆಗೆ ವರ್ಗವಾಗಿದ್ದಾರೆ. ಬನವಾಸಿಯಲ್ಲಿದ್ದ ಚಂದ್ರಕಲಾ ಪತ್ತಾರ್ ಸ್ಥಳ ನಿರೀಕ್ಷೆಯಲ್ಲಿದ್ದು, ಅವರು ಮಂಗಳೂರಿನ ಐಜಿ ಕಚೇರಿಗೆ ತೆರಳುವ ಸಾಧ್ಯತೆ ಹೆಚ್ಚಿದೆ.
ಮಂಗಳೂರಿನಲ್ಲಿದ ಸಾವಿತ್ರಿ ನಾಯ್ಕ ಕುಮಟಾ ಪೊಲೀಸ್ ಠಾಣೆಯ ತನಿಖಾ ವಿಭಾಗಕ್ಕೆ ಹಾಗೂ ಮಲ್ಲಾಪುರ ಪೊಲೀಸ್ ಠಾಣೆಯಲ್ಲಿದ್ದ ನವೀನ ಬೋರ್ಕರ್ ಬೈಂದೂರು ಠಾಣೆಗೆ ವರ್ಗವಾಗಿದ್ದಾರೆ.
Discussion about this post