ಕಾರವಾರ ನಗರಸಭೆ ಆವಾರದಲ್ಲಿ `ಪೋಕ್ಸೋ’ ಕಾಯ್ದೆ ಕುರಿತು ಜುಲೈ 11ರ ಬೆಳಗ್ಗೆ 9.30ಕ್ಕೆ ಕಾರ್ಯಾಗಾರ ನಡೆಯಲಿದೆ.
ಈ ಕಾರ್ಯಕ್ರಮಕ್ಕೆ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ ಹಾಗೂ ವಿವಿಧ ಸಂಸ್ಥೆಗಳ ಸಹಯೋಗವಿದೆ. ಜಿಲ್ಲಾ ನ್ಯಾಯಾಧೀಶ ಡಿ ಎಸ ವಿಜಯಕುಮಾರ್ ಸಭೆ ಉದ್ಘಾಟಿಸುವರು. ನ್ಯಾಯಾಧೀಶರಾದ ಪ್ರತಿಭಾ ಕುಲಕರ್ಣಿ, ಮಾಯಣ್ಣ ಬಿ ಎಲ್, ದಿವ್ಯಶ್ರೀ ಸಿ ಎಂ, ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಎಂ ಹಾಗೂ ವಕೀಲರ ಸಂಘದ ಅಧ್ಯಕ್ಷ ಕೆ ಬಿ ನಾಯ್ಕ ಭಾಗವಹಿಸುವರು.
ನ್ಯಾಯವಾದಿಗಳಾದ ರಾಜೇಶ್ವರಿ ನಾಯ್ಕ ಹಾಗೂ ಪದ್ಮಾ ತಾಂಡೇಲ್ ವಿಶೇಷ ಉಪನ್ಯಾಸ ನೀಡುವರು. ಪೋಕ್ಸೋ ಕಾಯ್ದೆ ಹಾಗೂ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗೆ ಸಂಘ ಸಂಸ್ಥೆಗಳ ಪಾತ್ರದ ಬಗ್ಗೆ ಅರಿವು ಮೂಡಿಸಲಾಗುತ್ತದೆ.
Discussion about this post