ದಾಂಡೇಲಿ: ಕಳೆದ ಮೂರು ವರ್ಷಗಳಲ್ಲಿ ಕಾಳಿ ನದಿಯ ಮೊಸಳೆ ದಾಳಿಗೆ ಐದು ಜನ ಬಲಿಯಾಗಿದ್ದು, ಇದನ್ನು ತಡೆಯಲು ಅರಣ್ಯ ಇಲಾಖೆ ನದಿಗೆ ಇಳಿಯದಂತೆ ಬೇಲಿ ನಿರ್ಮಿಸಿದೆ. ಅದಾಗಿಯೂ ಮಹಿಳೆಯೊಬ್ಬರು ಮೊಸಳೆಗೆ ಹೆದರದೇ ಬಟ್ಟೆ ಒಗೆಯುವುದಕ್ಕಾಗಿ ನದಿಗೆ ಇಳಿದಿದ್ದಾರೆ!
ಬಟ್ಟೆ ತೊಳೆಯುವ ಉದ್ದೇಶದಿಂದ ಮಹಿಳೆ ಅರಣ್ಯ ಇಲಾಖೆ ನಿರ್ಮಿಸಿದ ಬೇಲಿಯನ್ನು ಹಾರಿ ನದಿಗೆ ಇಳಿದಿದ್ದಾರೆ. ಕುಳಗಿ ರಸ್ತೆಯ ಈಶ್ವರ ದೇವಾಲಯದ ಬಳಿ ನಿರ್ಮಿಸಿದ ಬೇಲಿ ಹಾರಿದ ಮಹಿಳೆಯ ಚಿತ್ರಣಗಳು ಅರಣ್ಯ ಇಲಾಖೆಗೆ ತಲುಪಿದ್ದು, ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ನದಿಗೆ ಇಳಿಯದಂತೆ ಜನರಲ್ಲಿ ಅರಿವು ಮೂಡಿಸುತ್ತಿದೆ. ಅರಣ್ಯ ಸಿಬ್ಬಂದಿ ನದಿಗೆ ಇಳಿದ ಮಹಿಳೆಗೂ ಸಹ ಎಚ್ಚರಿಕೆ ನೀಡಿದ್ದಾರೆ.
ಮೊಸಳೆಗೆ ಬೆದರದೇ ಬೇಲಿ ಹಾರಿದ ಮಹಿಳೆ!

Leave a comment