ದಾಂಡೇಲಿ: ಹಳಿಯಾಳ- ದಾಂಡೇಲಿ ರಾಜ್ಯ ಹೆದ್ದಾರಿ ಅಂಚಿನಲ್ಲಿ 15ಕ್ಕೂ ಅಧಿಕ ಕೋಳಿಗಳು ಅನುಮಾನಾಸ್ಪದ ರೀತಿಯಲ್ಲಿ ಸಾವನಪ್ಪಿದೆ.
ಆಲೂರು ತಿರುವಿನ ಬಳಿ ಕೋಳಿಗಳ ಶವ ಕಾಣಿಸುತ್ತಿದೆ. ಇಷ್ಟು ಪ್ರಮಾಣದಲ್ಲಿನ ಕೋಳಿಗಳು ಹೇಗೆ ಸತ್ತವು? ಎಂಬ ಅನುಮಾನ ದಾರಿಹೋಕರನ್ನು ಕಾಡುತ್ತಿದೆ. ಸಾವನಪ್ಪಿದ ಕೋಳಿಗಳನ್ನು ಯಾರೋ ಇಲ್ಲಿ ತಂದು ಎಸೆದಿರುವ ಶಂಕೆಯಿದ್ದು, ಏತಕ್ಕಾಗಿ ಅವು ಸಾವನಪ್ಪಿದವು? ಇಲ್ಲಿ ಏಕೆ ಎಸೆದರು? ಎಂಬ ಪ್ರಶ್ನೆಗೆ ಸಹ ಉತ್ತರವಿಲ್ಲ. ಸಾವಿನಪ್ಪಿದ ಎಲ್ಲವೂ ಬಿಳಿ ಬಣ್ಣದ ಕೋಳಿಗಳಾಗಿವೆ.
Discussion about this post