ಕುಮಟಾ: ಮಿರ್ಜಾನ ಸಂಕ್ರೆಕಟ್ಟೆ ಬಳಿಯ ಮಣ್ಣಿನ ರಸ್ತೆ ಕುಸಿದಿದ್ದರಿಂದ ಇಲ್ಲಿ ಕಂದಕ ಉಂಟಾಗಿದೆ.
ರೇಲ್ವೆ ಟರ್ನಲ್ ಬಳಿಯ ಮಣ್ಣಿನ ರಸ್ತೆ ಇದಾಗಿದೆ. ಕಂದಕದ ಕಾರಣ ವಾಹನ ಸವಾರರಿಗೆ ತೊಂದರೆಯಾಗಿದೆ.
ಈ ರಸ್ತೆಯ ಎಡದಿಂದ ಬಲಕ್ಕೆ ಇಲ್ಲಿ ಹಳ್ಳ ಹರಿಯುತ್ತಿದ್ದು, ಆ ಭಾಗದ ಸಂಚಾರಕ್ಕೆ ಇರುವ ಏಕೈಕ ರಸ್ತೆ ಇದಾಗಿದೆ. ಇಲ್ಲಿನ ಹೊಂಡದ ಕೆಳಗೆ ಅಳವಡಿಸಿದ ನೀರಿನ ಪೈಪ್ ಮಣ್ಣಿನಲ್ಲಿ ಸಿಲುಕಿದೆ. ರಾತ್ರಿ ವೇಳೆ ಈ ಮಾರ್ಗದಲ್ಲಿ ಸಂಚರಿಸುವುದು ಅಪಾಯಕಾರಿ. ಹೀಗಾಗಿ ಎಚ್ಚರವಹಿಸುವುದು ಒಳಿತು.
Discussion about this post