ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆಯಲ್ಲಿ ಪಾಸಾಗಿ ಮುಂದೆನು? ಎಂದು ಯೋಚಿಸುತ್ತಿದ್ದವರಿಗೆ ಸರ್ಕಾರಿ ಸಂಸ್ಥೆಯೊoದರಲ್ಲಿ ಉದ್ಯೋಗದ ತರಬೇತಿ ಸಿಗುತ್ತದೆ. ಕಾರವಾರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ `ಟಿ.ಆರ್.ಎ.ಸಿ, ಟರ್ನರ್, ವೆಲ್ಡರ್, ಎಮ್.ಇ.ವಿ ಹಾಗೂ ಐ.ಆರ್.ಡಿ.ಎಮ್’ ವೃತ್ತಿಗಳ ಬಾಕಿ ಉಳಿದುಕೊಂಡಿರುವ 60 ಸ್ಥಾನಗಳಿಗೆ ಆಸಕ್ತಿ ಇರುವವರಿಗೆ ಅರ್ಜಿ ಕರೆಯಲಾಗಿದೆ.
ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡಿರುವ ಅಭ್ಯರ್ಥಿಗಳಿಗೆ ಹಾಗೂ ಇದುವರೆಗೂ ಎಲ್ಲಿಯೂ ಪ್ರವೇಶ ಪಡೆಯದೇ ಇರುವ ಅಭ್ಯರ್ಥಿಗಳಿಗೆ ಇದು ಅನುಕೂಲವಾಗಲಿದೆ. ಎಸ್‌ಎಸ್‌ಎಲ್‌ಸಿ ವಿದ್ಯಾಭ್ಯಾಸ ಪೂರ್ಣಗೊಳಿಸಿರುವವರು ಸಂಸ್ಥೆಗೆ ಬಂದು ಅರ್ಜಿ ಹಾಗೂ ದೃಢೀಕೃರ ಪ್ರತಿಗಳನ್ನು ಸಲ್ಲಿಸಬೇಕು. ನಂತರ ಅರ್ಜಿ ಪರಿಶೀಲಿಸಿ ಪ್ರವೇಶ ನೀಡಲಾಗುತ್ತದೆ.
ಅರ್ಜಿ ಸಲ್ಲಿಸಲು ಆಗಸ್ಟ್ 31 ಕೊನೆ. ಮಾಹಿತಿಗೆ 9448635044 ಅಥವಾ 8660467949ಗೆ ಕರೆ ಮಾಡಿ.
Discussion about this post