ನಿನ್ನೆಯವರೆಗೂ ಹಾವು-ಮುಂಗುಸಿಯoತೆ ಇದ್ದ ಶಾಸಕ ಭೀಮಣ್ಣ ನಾಯ್ಕ ಹಾಗೂ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಶುಕ್ರವಾರ ಶಿರಸಿಯಲ್ಲಿ ಪರಸ್ಪರ ಶುಭಾಶಯ ಕೋರಿಕೊಂಡರು.
ಶಾಸಕ ಭೀಮಣ್ಣ ನಾಯ್ಕ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಅವರ ಕಚೇರಿಯಲ್ಲಿ ಭೇಟಿ ಮಾಡಿ ಸನ್ಮಾನಿಸಿದರು. ಈ ವೇಳೆ ಕಾಗೇರಿ ಸಹ ಭೀಮಣ್ಣ ಅವರ ಯೋಗಕ್ಷೇಮ ವಿಚಾರಿಸಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಭೀಮಣ್ಣ ನಾಯ್ಕ ಹಾಗೂ ವಿಶ್ವೇಶ್ವರ ಹೆಗಡೆ ಕಾಗೇರಿ ಎದುರಾಳಿಗಳಾಗಿದ್ದರು. ಇದೀಗ ಅದೆಲ್ಲವನ್ನು ಮರೆತು `ಇಬ್ಬರು ಸೇರಿ ಅಭಿವೃದ್ಧಿ ಕೆಲಸ ಮಾಡೋಣ’ ಎಂದು ಮಾತನಾಡಿಕೊಂಡರು.
Discussion about this post