ಕುಮಟಾ: ನ್ಯಾಯಾಲಯದಲ್ಲಿ ಬಾಕಿಯಿದ್ದ 432 ಪ್ರಕರಣಗಳನ್ನು ನ್ಯಾಯಾಧೀಶರೇ ಕಾಳಜಿವಹಿಸಿ ರಾಜಿ ಮಾಡಿಸಿದ್ದು, 432 ಪ್ರಕರಣಗಳು ಖುಲಾಸೆಯಾಗಿವೆ.
ಲೋಕ್ ಅದಾಲತ್’ನಲ್ಲಿ ವ್ಯಾಜ್ಯ ಪೂರ್ವ ಹಾಗೂ ರಾಜಿ ಪ್ರಕರಣಗಳ ವಿಚಾರಣೆ ನಡೆಸಿದ ನ್ಯಾಯಾಧೀಶರು ಕೆಲ ಕ್ರಿಮಿನಲ್ ಹಾಗೂ ಹಲವು ಸಿವಿಲ್ ಪ್ರಕರಣಗಳನ್ನು ಸಂದಾನದ ಮೂಲಕ ಬಗೆಹರಿಸಿದರು. ಬ್ಯಾಂಕ್ ವಾಯ್ದೆ, ಚೆಕ್ ಬೌನ್ಸ್, ವಿಮಾ ಮೊತ್ತ ಪಾವತಿ ಹಾಗೂ ಮೋಟಾರ್ ವಾಹನ ಕಾಯ್ದೆ ಕುರಿತಾದ ದೂರುಗಳು ಬಗೆಹರಿದವು.ಒಟ್ಟೂ 3831 ಪ್ರಕರಣಗಳನ್ನು ಬಗೆಹರಿಸುವ ಪ್ರಯತ್ನ ನಡೆದಿದ್ದು, 432 ಪ್ರಕರಣದಲ್ಲಿ ದೂರುದಾರರು ಹಾಗೂ ಎದುರುದಾರರು ರಾಜಿ ಆದರು.
ಹಿರಿಯ ಸಿವಿಲ್ ನ್ಯಾಯಾಧೀಶೆ ಭಾರತಿ ಶಿವಪುತ್ರ ರಾಯಣ್ಣನವರ್, ಪ್ರಧಾನ ಸಿವಿಲ್ ನ್ಯಾಯಾಧೀಶೆ ಜೊಯಲಿನ್ ಮೆಂಡೊನ್ಸಾ ಹಾಗೂ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ವರ್ಷಶ್ರೀ ಪ್ರಕರಣಗಳ ಕುರಿತು ವಿಚಾರಣೆ ನಡೆಸಿ, ಸಂದಾನ ಮಾಡಿಸಿದರು. ಸಂಧಾನಕಾರರಾಗಿ ವಕೀಲರಾದ ಬಿ.ಡಿ.ಶ್ರೀನಾಥ, ಎಮ್.ಡಿ. ರಫೀಕ್, ಪಿ.ಎಲ್.ಹೆಗಡೆ ಸಹ ಕೆಲಸ ನಿರ್ವಹಿಸಿದರು.
Discussion about this post