ಭಟ್ಕಳ: ಕಾಶೀಮಠದ ವ್ಯವಸ್ಥಾಪಕ ಸಮಿತಿ ಸದಸ್ಯರು ಸೋಮವಾರ ಸ್ನೇಹಾ ಶಾಲೆಗೆ ಭೇಟಿ ನೀಡಿದರು. ಅಲ್ಲಿರುವ ವಿಕಲ ಚೇತನ ಮಕ್ಕಳೊಂದಿಗೆ ಕಾಲ ಕಳೆದ ಅವರ ನಂತರ ಎಲ್ಲಾ ಮಕ್ಕಳಿಗೂ ಸಿಹಿ ಊಟ ಬಡಿಸಿದರು.
ಕಾಶೀಮಠದ 20ನೇ ಯತಿವರ್ಯ ಸುಧೀಂದ್ರ ತೀರ್ಥ ಸ್ವಾಮೀಜಿ ಜನ್ಮ ಶತಾಬ್ದ ಆರಾಧನಾ ಮಹೋತ್ಸವದ ಅಂಗವಾಗಿ ಸಮಿತಿಯವರು ಇಲ್ಲಿ ಆಗಮಿಸಿದ್ದರು. ಸಮಿತಿಯ ವಿಶ್ವನಾಥ ನಾಯಕ, ಬಿ ಕೆ ಪೈ, ಶ್ರೀಧರ ಶಾನಭಾಗ, ವೆಂಕಟೇಶ್ ನಾಯಕ, ಸುನೀಲ ಕಾಮತ್ ಇತರರು ಇದ್ದರು. ಭಟ್ಕಳ ಎಜ್ಯುಕೇಶನ ಟ್ರಸ್ಟಿನ ಗುರು ಸುಧೀಂದ್ರ ಅವರನ್ನು ಸ್ನೇಹಾ ಶಾಲೆಗೆ ಕರೆತಂದರು. ಕಾಶೀಮಠದ ಅಧ್ಯಕ್ಷರಾದ ಶ್ರೀ ಸುರೇಂದ್ರ ಆನಂದ ಕಾಮತ ಜೊತೆಯಿದ್ದರು.
Discussion about this post