ದಾಂಡೇಲಿ: ಕೋಗಿಲಬನದ ಸ್ಮಶಾನದ ಎದುರು ಬೈಕಿನಿಂದ ಬಿದ್ದ ನಾಗರಾಜ ವೈಂಗಣಕರ್ (28) ಎಂಬಾತನ ತಲೆ ಒಡೆದಿದ್ದು, ರಕ್ತದ ಮಡುವಿನಲ್ಲಿ ಹೊರಳಾಡಿ ಆತ ಸಾವನಪ್ಪಿದ್ದಾನೆ.
ಜೊಯಿಡಾದ ಚಾಪೇಲಿ ಬಳಿಯ ಕೆಕ್ವಾಡದ ನಾಗರಾಜ್ ಜುಲೈ 14ರ ರಾತ್ರಿ ರೋಹಿದಾಸ್ ಗಾಳಕರ್ ಎಂಬಾತನನ್ನು ಸ್ಕೂಟಿಯಲ್ಲಿ ಕೂರಿಸಿಕೊಂಡು ದಾಂಡೇಲಿಯಿAದ ಬಾಪೇಲಿಗೆ ಹೋಗುತ್ತಿದ್ದ. ಕೊಳಗಿಬನದ ಸ್ಮಶಾನದ ಬಳಿ ಸ್ಕೂಟಿ ನಿಯಂತ್ರಣ ತಪ್ಪಿದ್ದು, ಸ್ಕೂಟಿ ಅಪಘಾತವಾಗಿದೆ. ಇದರಿಂದ ಇಬ್ಬರು ಸವಾರರು ನೆಲಕ್ಕೆ ಅಪ್ಪಳಿಸಿ ಗಾಯಗೊಂಡಿದ್ದಾರೆ. ಅಪಘಾತದ ರಭಸಕ್ಕೆ ನಾಗರಾಜನ ತಲೆ ಒಡೆದಿದ್ದು, ಮೂಗಿನಿಂದ ರಕ್ತ ಸುರಿಯುತ್ತಿರುವುದನ್ನು ರೋಹಿದಾಸ್ ನೋಡಿದ್ದಾನೆ.
ರಕ್ತದ ಮೊಡವಿನಲ್ಲಿ ಹೊರಳಾಡುತ್ತಿದ್ದ ಗಾಯಾಳುಗಳನ್ನು ಇದೇ ದಾರಿಯಲ್ಲಿ ಸಂಚರಿಸುತ್ತಿದ್ದ ಜೀಪಿನವರು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಆಸ್ಪತ್ರೆ ಸೇರವ ಮೊದಲೇ ನಾಗರಾಜ್ ಸಾವನಪ್ಪಿರುವುದಾಗಿ ಅಲ್ಲಿನ ವೈದ್ಯರು ಘೋಷಿಸಿದ್ದಾರೆ. ಈ ಅಪಘಾತದಲ್ಲಿ ಸ್ಕೂಟಿಯ ಸಹ ಸವಾರನಾಗಿದ್ದ ರೋಹಿದಾಸ್’ಗೆ ಕೈ-ಕಾಲು ಹಾಗೂ ಮೊಖಕ್ಕೆ ಪೆಟ್ಟಾಗಿದೆ.
Discussion about this post