ಯಲ್ಲಾಪುರ: ನಿಷೇಧದ ನಡುವೆಯೂ ಮಾಗೋಡು ಬೆಟ್ಟದಲ್ಲಿನ ಕುಳಿಮಾಗೋಡು ಜಲಪಾತ ವೀಕ್ಷಣೆಗೆ ತೆರಳಿದ್ದ ಹುಬ್ಬಳ್ಳಿಯ ಶ್ರೀಧರ ಈರಣ್ಣ ಪೂಜಾರ (32) ಹಾಗೂ ವಿನಾಯಕ ಶರಣಪ್ಪ ನಾಗರಾಳ (28) ಎಂಬಾತರಿಗೆ ಅರಣ್ಯ ಸಿಬ್ಬಂದಿ ಬಿಸಿ ಮುಟ್ಟಿಸಿದ್ದಾರೆ. ಇಬ್ಬರನ್ನು ಅರಣ್ಯ ಇಲಾಖೆಯವರು ಬಂಧಿಸಿ, ಪ್ರಕರಣ ದಾಖಲಿಸಿದ್ದಾರೆ.
ಪ್ರವಾಸಿಗರ ಜೀವಕ್ಕೆ ಹಾನಿ ಆಗುವ ಪ್ರಮಾಣದಲ್ಲಿ ನೀರು ಬರುತ್ತಿರುವುದರಿಂದ ಅರಣ್ಯ ಇಲಾಖೆ ಜಲಪಾತ ವೀಕ್ಷಣೆಗೆ ತಡೆ ಒಡ್ಡಿದೆ. ಈ ಬಗ್ಗೆ ಸೂಚನಾ ಫಲಕವನ್ನು ಸಹ ಅಳವಡಿಸಲಾಗಿದೆ. ಅದಾಗಿಯೂ ಈ ಇಬ್ಬರು ಕುಳಿಮಾಗೋಡಿಗೆ ತೆರಳಿದ್ದು, ಇದನ್ನು ನೋಡಿದ ಉಪವಲಯ ಅರಣ್ಯ ಅಧಿಕಾರಿ ಗುರುಪ್ರಸಾದ್ ಕೆ ಹಾಗೂ ವನಪಾಲಕ ಕಾಶಿನಾಥ ಯಂಕoಚಿ ಆ ಇಬ್ಬರಿಗೂ ಅಪಾಯದ ಮುನ್ಸೂಚನೆ ನೀಡಿದ್ದಾರೆ. ಅರಣ್ಯ ಸಿಬ್ಬಂದಿ ಮಾತು ಕೇಳದೇ ಆ ಇಬ್ಬರು ಮುನ್ನುಗ್ಗಿದ ವಿಷಯ ಅರಿತು ವಲಯ ಅರಣ್ಯಾಧಿಕಾರಿ ಶಿಲ್ಪಾ ನಾಯ್ಕ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಿಮಾವತಿ ಭಟ್ ಅವರಿಗೆ ಮಾಹಿತಿ ರವಾನಿಸಿದ್ದಾರೆ. ಅರಣ್ಯ ಕಾಯ್ದೆ ಉಲ್ಲಂಗಿಸಿದವರ ಮೇಲೆ ಕ್ರಮ ಜರುಗಿಸುವಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಹರ್ಷ ಭಾನು ಜಿ ಪಿ ಸೂಚಿಸಿದ ಹಿನ್ನಲೆ ಅವರಿಬ್ಬರನ್ನು ಬಂಧಿಸಿದ್ದಾರೆ.
Discussion about this post