`ಕರಾವಳಿಯಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆ ಎದುರಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರ ಒಟ್ಟಿಗೆ ಶ್ರಮಿಸುತ್ತಿದೆ. ಸಾಕಷ್ಟು ಮುನ್ನಚ್ಚರಿಕೆವಹಿಸಿದರೂ ಅಲ್ಲಲ್ಲಿ ಕೆಲ ಅವಾಂತರ ನಡೆದಿದ್ದು, ಯಾರಿಗೂ ತೊಂದರೆ ಆಗಬಾರದು ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು `ಮಳೆ ಬೇಕೇ ಬೇಕು. ಆದರೆ, ಅತಿಯಾದ ಮಳೆಯಿಂದ ಯಾರಿಗೂ ತೊಂದರೆ ಆಗಬಾರದು. ವರುಣ ದೇವ ಜನರ ಮೇಲೆ ದಯೆ ತೋರಬೇಕು. ಈ ಬಗ್ಗೆ ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ’ ಎಂದು ಅವರು ಹೇಳಿದರು.
`ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಗಾಲದ ಸಮಸ್ಯೆ ಸಾಕಷ್ಟಿದೆ. ಭಾರತೀಯ ನೌಕಾನೆಲೆ ಪ್ರದೇಶದಲ್ಲಿ ನೀರು ನಿಲ್ಲುತ್ತಿದೆ. ಜನರ ಮನೆಯೊಳಗೆ ನೀರು ನುಗ್ಗಿದ್ದು, ಅಲ್ಲಿನ ನೀರು ತೆಗೆಯುವ ಪ್ರಯತ್ನ ನಡೆಯುತ್ತಿದೆ. ಸೀಬರ್ಡ ಪ್ರದೇಶದಲ್ಲಿ ನೀರು ಹೊರಹೋಗಲು ಸಮಸ್ಯೆಯಾಗಿದ್ದ ಸೇತುವೆಯನ್ನು ಒಡೆಯುವ ಕೆಲಸ ನಡೆದಿದೆ. ಮಳೆ ಮುಗಿದ ನಂತರ ಮತ್ತೆ ಸ್ಥಳ ಪರಿಶೀಲಿಸಿ, ಶಾಶ್ವತ ಪರಿಹಾರ ಒದಗಿಸುವುದು ನನ್ನ ಜವಾಬ್ದಾರಿ’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
`ಮಳೆಯ ಎಲ್ಲಾ ನೀರು ಸಮುದ್ರಕ್ಕೆ ಹೋಗುವಂತೆ ಮಾಡಬೇಕು. ಸಮುದ್ರ ಏರಿಳಿತ ಇರುವ ಕಾರಣ ಸಮಸ್ಯೆಯಾಗಿದ್ದು, ಸಂಜೆಯೊಳಗೆ ಜನವಸತಿ ಪ್ರದೇಶಕ್ಕೆ ನುಗ್ಗಿದ ನೀರು ಸಮುದ್ರ ಸೇರುವ ಸಾಧ್ಯತೆಯಿದೆ’ ಎಂದರು.
`ಗoಗಾವಳಿ ನದಿಯಲ್ಲಿ ಗ್ಯಾಸ್ ಟ್ಯಾಂಕರ್ ಬಿದ್ದಿದ್ದು, ಗ್ಯಾಸ್ ಹೊರಬರದಂತೆ ತಡೆಯಲು ಮಂಗಳೂರಿನಿoದ ವಿಶೇಷ ತಜ್ಞರನ್ನು ಕರೆಯಿಸಲಾಗಿದೆ. ಜನ ಈ ಬಗ್ಗೆ ಎಚ್ಚರವಹಿಸಬೇಕು’ ಎಂದು ಕರೆ ನೀಡಿದರು.
ಸಂಸದ ವಿಶ್ವೇಶ್ವರ ಹೆಗಡೆ ಅವರು ನಡೆಸಿದ ಸುದ್ದಿಗೋಷ್ಟಿ ವಿಡಿಯೋ ಇಲ್ಲಿ ನೋಡಿ..
Discussion about this post