ಯಲ್ಲಾಪುರ: ಎಂಡೋಸಲ್ಫಾನ್’ನಿoದ ಬಳಲುತ್ತಿರುವ 14 ವರ್ಷದ ಅಬ್ದುಲ್ ಮಥೀನ್ ಶೇಖ್ ಸಲೀಮ್ 72 ಇಂಗ್ಲಿಷ್ ಪದಗಳನ್ನು ಹಿಂದೆ-ಮುoದೆ ಉಚ್ಚರಿಸುವ ಮೂಲಕ `ಇಂಡಿಯಾ ಬುಕ್ ಆಫ್ ರೆಕಾಡ್ಸ್’ನಲ್ಲಿ ಹೆಸರು ದಾಖಲಿಸಿದ್ದಾನೆ.
ಶಾರದಾ ಗಲ್ಲಿಯ ಈತ ಪ್ರಸ್ತುತ ಬೆಂಗಳೂರಿನ ಪ್ರೆಸಿಡೆಂಸಿ ಶಾಲೆಯಲ್ಲಿ ಓದುತ್ತಿದ್ದು `ಗಿನ್ನೆಸ್ ವರ್ಲ್ಡ್ ರೆಕಾಡ’ಗೆ ಸಹ ತಯಾರಿ ನಡೆಸಿದ್ದಾನೆ.
ಹುಟ್ಟುತ್ತಲೇ ಅಂಗವಿಕಲನಾಗಿರುವ ಈತ ಯಾವುದೇ ಇಂಗ್ಲೀಷ್ ಶಬ್ದ ಹೇಳಿದರೂ ಅದರ ಸ್ಪೆಲ್ಲಿಂಗ್ ಉಲ್ಟಾ ಹೇಳುವುದರಲ್ಲಿ ಪರಿಣಿತಿ ಹೊಂದಿದ್ದಾನೆ. ಪ್ರತಿ ನಿಮಿಷಕ್ಕೆ 50 ಶಬ್ದಗಳ ಸ್ಪೆಲ್ಲಿಂಗ್ ಉಲ್ಟಾ ಹೇಳುವುದನ್ನು ರೂಡಿಸಿಕೊಂಡಿದ್ದಾನೆ. ಜೊತೆಗೆ 50ರವರೆಗಿನ ಮಗ್ಗಿಯನ್ನು ಸಹ ಈತ ಹೇಳುವುದನ್ನು 11ನೇ ವಯಸ್ಸಿಗೆ ಕರಗತ ಮಾಡಿಕೊಂಡಿದ್ದ. ಈತನ ಪಾಲಕರಾದ ಶೇಖ್ ಸಲೀಂ ಮತ್ತು ಮಮ್ತಾಜ್ ಬೇಗಂ ಟೇಲರ್ ಆಗಿದ್ದಾರೆ.
Discussion about this post