ಜೊಯಿಡಾ: ಗಣೇಶಗುಡಿ – ದಾಂಡೇಲಿ ತೆರಳುವಾಗ ರಸ್ತೆಗಿಂತಲೂ ಹೆಚ್ಚಿನ ಭಾಗ ಹೊಂಡಗಳು ಕಾಣುತ್ತಿವೆ. ಇಲ್ಲಿ ಹೊಂಡ ತಪ್ಪಿಸಿಕೊಂಡು ಹೋಗಲು ವಾಹನ ಸವಾರರು ಸಾಹಸ ಮಾಡುತ್ತಿದ್ದಾರೆ.
ಗಣೇಶಗುಡಿ ಗೌಳಿವಾಡಾ ಹತ್ತಿರ ಹೆಚ್ಚಿನ ಹೊಂಡಗಳಿವೆ. ಯಾವ ಹೊಂಡ ದೊಡ್ಡು? ಯಾವ ಹೊಂಡ ಚಿಕ್ಕದು ಎಂದು ಗೊತ್ತಾಗುತ್ತಿಲ್ಲ. ಹೀಗಾಗಿ ಸವಾರರು ಅಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ. ಕೆಲವೊಮ್ಮೆ ಹೊಂಡಗಳನ್ನು ಮುಚ್ಚುವ ಕೆಲಸ ನಡೆದಿದ್ದರೂ ಕಾಮಗಾರಿ ಅಪೂರ್ಣವಾಗುತ್ತಿದೆ. ಮರುವರ್ಷ ಮತ್ತೆ ಹೊಸ ಹೊಂಡ ಬೀಳುತ್ತಿದೆ. ಪ್ರವಾಸೋದ್ಯಮ ಕಾರಣ ಹೆಚ್ಚಿನ ಜನ ಬರುವ ಈ ಕ್ಷೇತ್ರದಲ್ಲಿ ಹೊಂಡಗಳೇ ಹೆಚ್ಚಿರುವುದರಿಂದ ಬೇರೆ ಪ್ರದೇಶದಿಂದ ಬಂದವರು ಶಪಿಸುತ್ತ ಹೋಗುವುದು ಸಾಮಾನ್ಯವಾಗಿದೆ.




Discussion about this post