ಕುಮಟಾ: ಕರಾವಳಿಯಲ್ಲಿ ಭಾರೀ ಪ್ರಮಾಣದ ಮಳೆಯಾಗುತ್ತಿದ್ದು, ಪುಣ್ಯಕ್ಷೇತ್ರಗಳು ಸಹ ಇದರಿಂದ ಹೊರತಾಗಿಲ್ಲ.
ಗೋಕರ್ಣದಲ್ಲಿ ಕಳೆದ ಒಂದುವಾರದಿoದ ನಿರಂತರವಾಗಿ ಮಳೆ ಸುರಿಯುತ್ತಿದೆ. ಗುರುವಾರ ಸುರಿದ ಮಳೆಗೆ ರಸ್ತೆಯ ಮೇಲೆ ಪೂರ್ತಿ ನೀರು ನಿಂತಿದ್ದು, ಜನ ತೊಂದರೆ ಅನುಭವಿಸಿದರು. ಮಹಾಗಣಪತಿ ದೇವಾಲಯದ ಮುಂದೆ ನೀರು ಭರ್ತಿಯಾಗಿದ್ದು, ಓಡಾಟಕ್ಕೂ ಸಾಧ್ಯವಾಗಲಿಲ್ಲ.ಇದರಿಂದ ದೇವಾಲಯದ ಒಳ ಪ್ರವೇಶಿಸುವ ಭಕ್ತರ ಸಂಖ್ಯೆ ಕಡಿಮೆಯಾಗಿದ್ದು, ಜನ ದೂರದಿಂದಲೇ ಕೈ ಮುಗಿದರು. ವ್ಯಾಪಕ ಮಳೆ ಪರಿಣಾಮ ಅಲ್ಲಲ್ಲಿ ಹಾನಿ ಉಂಟಾಗಿದೆ.
Discussion about this post