ಭಟ್ಕಳ: ಬಾಳೆಹಿತ್ಲುವಿನ ವಸಂತ ಕುಪ್ಪ ನಾಯ್ಕ (53) ಎಂಬಾತ ಕಾಲು ಜಾರಿ ನದಿಗೆ ಬಿದ್ದಿದ್ದಾನೆ. ಈವರೆಗೂ ಆತ ಪತ್ತೆಯಾಗಿಲ್ಲ.
ಜುಲೈ 17ರ ಮಧ್ಯಾಹ್ನ ಈತ ಬಾಳೆಹಿತ್ಲುವಿನ ಅಳ್ವೆಕೊಡಿಯ ನದಿ ತಟಕ್ಕೆ ಬಹಿರ್ದೆಸೆಗೆ ಹೋಗಿದ್ದ. ಆಗ ನದಿಯಲ್ಲಿ ಕಾಲು ಜಾರಿ ಬಿದ್ದಿದ್ದು ಕೊಚ್ಚಿ ಹೋಗಿದ್ದಾನೆ. `ಆತನನ್ನು ಹುಡುಕಿಕೊಡಿ’ ಎಂದು ಕುಟುಂಬದವರು ಪೊಲೀಸರ ಬಳಿ ಬಂದಿದ್ದಾರೆ.




Discussion about this post