ಕುಮಟಾ ತಾಲೂಕಿನ ಬರ್ಗಿ ಗುಡ್ಡ ಕುಸಿತವಾಗಿದ್ದು, ಹೆದ್ದಾರಿ ಮೇಲೆ ಮಣ್ಣಿನ ರಾಶಿ ಬಿದ್ದಿದೆ. ಹೀಗಾಗಿ ಈ ಮಾರ್ಗದ ಸಂಚಾರ ಸ್ಥಗಿತಗೊಂಡಿದೆ.
ಪ್ರಸ್ತುತ ಗೋಕರ್ಣ, ಕಾರವಾರ, ಗೋವಾ, ಯಲ್ಲಾಪುರ ಸಂಚರಿಸುವ ವಾಹನಗಳನ್ನು ಬರ್ಗಿ, ಕಿಮಾನಿ, ಕೊಡ್ಕಣಿ ಮಾರ್ಗದಲ್ಲಿ ಬಿಡಲಾಗುತ್ತಿದೆ. ಬೆಳಗ್ಗೆ ಅಲ್ಪ ಪ್ರಮಾಣದಲ್ಲಿ ಹೆದ್ದಾರಿ ಮೇಲೆ ಮಣ್ಣು ಬಿದ್ದಿದ್ದು, ಅದನ್ನು ತೆರವು ಮಾಡಲಾಗಿತ್ತು. ಆದರೆ, ಸಂಜೆ ವೇಳೆ ದೊಡ್ಡ ಗುಡ್ಡವೇ ಕುಸಿದಿದೆ. ಜುಲೈ 17ರ ಸಂಜೆ ಮಣ್ಣಿನ ಜೊತೆ ಮರಗಳು ಸಹ ಬಿದ್ದಿವೆ. ಜೋರು ಮಳೆ ಸುರಿಯುತ್ತಿರುವ ಕಾರಣ ತೆರವು ಕಾರ್ಯಾಚರಣೆ ಸಹ ನಿಧಾನವಾಗಿದೆ.




Discussion about this post