ಯಲ್ಲಾಪುರದ ನಾಯಕನಕೆರೆ ಬಳಿಯ ಶೆಡ್ ನಲ್ಲಿ ಸಾರಾಯಿ ಕುಡಿಯಲು ಅವಕಾಶ ಮಾಡಿಕೊಟ್ಟ ಟೀ ಅಂಗಡಿ ಮಾಲೀಕನ ವಿರುದ್ಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಲ್ಲಾಪುರದ ನಾಯಕನಕೆರೆ ಸಮೀಪದ ತನ್ನ ಟೀ ಅಂಗಡಿಯ ಶೆಡ್ ನಲ್ಲಿ ಅಂಕೋಲಾದ ಜೋಗಳ್ಸೆಯ ಮಂಜುನಾಥ ನಾಯ್ಕ ಎಂಬಾತ ಸಾರಾಯಿ ಕುಡಿಯುವವರಿಗೆ ಅವಕಾಶ ನೀಡಿದ್ದ.
ವಿಷಯ ತಿಳಿದು ದಾಳಿ ನಡೆಸಿದ ಪೊಲೀಸರು, 50 ರೂ ಮೌಲ್ಯದ ಎರಡು ವಿಸ್ಕಿ ಪೌಚ್ ಗಳು, ಒಂದಷ್ಟು ಖಾಲಿ ಪೌಚ್ ಗಳು, ಪ್ಲಾಸ್ಟಿಕ್ ಗ್ಲಾಸ್, ಖಾಲಿಯಾದ ನೀರಿನ ಬಾಟಲಿ ವಶಕ್ಕೆ ಪಡೆದಿದ್ದಾರೆ.