ರುಡ್‌ಸೆಟ್ ಸಂಸ್ಥೆಯಿoದ ದ್ವಿಚಕ್ರ ವಾಹನ ರಿಪೇರಿ ಮತ್ತು ಸೇವೆ ಕುರಿತ 30 ದಿನಗಳ ಉಚಿತ ತರಬೇತಿಯನ್ನು ಆಗಸ್ಟ್ 21ರಿಂದ ಆಯೋಜಿಸಲಾಗಿದೆ.
ಆಸಕ್ತರು 18 ರಿಂದ 45 ವರ್ಷ ವಯೋಮಾನದವರಾಗಿದ್ದು, ಕನ್ನಡ ಭಾಷೆ ಓದಲು ಮತ್ತು ಬರೆಯಲು ಬರೆಬೇಕು. ಬಿಪಿಎಲ್ ಕಾರ್ಡ್ ಅಥವಾ ಜಾಬ್ ಕಾರ್ಡ್ ಜೊತೆ ಆಧಾರ್ ಕಡ್ಡಾಯವಾಗಿ ಹೊಂದಿರಬೇಕು. ಅರ್ಜಿ ಸಲ್ಲಿಸಲು ಜುಲೈ 31ಕೊನೆ ದಿನ.
ತರಬೇತಿಯ ಅವಧಿಯಲ್ಲಿ ಊಟ-ವಸತಿ ಉಚಿತ. ತರಬೇತಿ ಮುಗಿಸಿದವರಿಗೆ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ಪ್ರಮಾಣಪತ್ರ ಸಿಗಲಿದೆ. ಆಸಕ್ತರು
ರುಡ್‌ಸೆಟ್ ಸಂಸ್ಥೆ
ಅರಿಶಿನಕುoಟೆ, ನೆಲಮಂಗಲ ತಾಲೂಕು
ಬೆಂಗಳೂರು ಗ್ರಾಮಾಂತರ ಜಿಲ್ಲೆ
ಮೋ: 9740982585 ಅಥವಾ 9380162042 ಸಂಪರ್ಕಿಸಿ
Discussion about this post