ಉತ್ತರ ಕನ್ನಡ ಜಿಲ್ಲೆಯಲ್ಲಿ ಈವರೆಗೆ ಜೂನ್ 1ರಿಂದ ಜುಲೈ 18ರವರೆಗೆ ಸುರಿದ ಮಳೆಯಿಂದ ಮಳೆಗೆ 2236 ಮನೆಗಳಿಗೆ ನೀರು ನುಗ್ಗಿದೆ.
252 ಮನೆಗಳ ಗೋಡೆ ಕುಸಿದಿದೆ. ಇದರಲ್ಲಿ 21 ಮನೆಗಳು ಸಂಪೂರ್ಣವಾಗಿ ನೆಲಸಮವಾಗಿದ್ದು, 37 ಮನೆಗಳಿಗೆ ಅಪಾರ ಹಾನಿಯಾಗಿದೆ. 194 ಮನೆಗಳು ಭಾಗಶಃ ಕುಸಿದಿದ್ದು, ಅವು ವಾಸಕ್ಕೆ ಯೋಗ್ಯವಾಗಿಲ್ಲ. ಈ ಅವಧಿಯಲ್ಲಿ 6 ಜಾನುವಾರುಗಳು ಸಾವನಪ್ಪಿದೆ. 2 ತೋಟಗಳು ಸಂಪೂರ್ಣ ನಾಶವಾಗಿದೆ. 2564 ಜನ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಈ ಅವಧಿಯಲ್ಲಿ ಮಳೆ ಕಾರಣದಿಂದ 10 ಜನ ಸಾವನಪ್ಪಿರುವುದು ಖಚಿತವಾಗಿದೆ.
Discussion about this post