ನೀರಿನ ಮೂಲಗಳಾದ ನದಿ, ತೊರೆ, ಹಳ್ಳ, ಕೆರೆ, ಬಾವಿಗಳಲ್ಲಿ ನೀರು ಮಾಲಿನ್ಯ ಹೆಚ್ಚಾಗುತ್ತಿದ್ದು ನೀರು ಹಾಳಾಗುವುದನ್ನು ತಡೆಯುವುದಕ್ಕಾಗಿ ಭಾರಲೋಹ ಮಿಶ್ರಿತ ರಸಾಯನಿಕ ಬಣ್ಣದಿಂದ ಅಲಂಕೃತಗೊoಡಿರುವ ಗಣೇಶ ವಿಗ್ರಹಗಳನ್ನು ಉತ್ಪಾದನೆ, ಮಾರಾಟ ಹಾಗೂ ವಿಸರ್ಜನೆ ಮಾಡದಂತೆ ಜಿಲ್ಲಾಡಳಿತ ಕೇಳಿಕೊಂಡಿದೆ. ಇಂಥವುಗಳನ್ನು ನೀರಿನ ಮೂಲಗಳಲ್ಲಿ ವಿಸರ್ಜಿಸುವುದನ್ನು ಸಹ ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಪ್ಲಾಸ್ಟರ ಆಪ್ ಪ್ಯಾರಿಸ್ ಮತ್ತು ರಾಸಾಯನಿಕ ವಸ್ತುಗಳಿಂದ ಮೂರ್ತಿಗಳನ್ನು ತಯಾರಿಸಲು ಅನುಮತಿ ಇಲ್ಲದ ಕಾರಣ ಮೂರ್ತಿ ತಯಾರಿಕೆಯಲ್ಲಿ ಕೇವಲ ಮಣ್ಣಿನ ಮೂರ್ತಿಗಳನ್ನು ಮಾರಾಟ ಮಾಡಬೇಕು ಎಂದು ಸರ್ಕಾರ ಮನವಿ ಮಾಡಿದೆ. ಅದಾಗಿಯೂ ಈ ನಿಯಮ ಉಲ್ಲಂಗಿಸಿದರೆ ಕ್ರಮ ಅನಿವಾರ್ಯ ಎಂದು ಎಚ್ಚರಿಸಲಾಗಿದೆ.





Discussion about this post