ಅ0ಕೋಲಾ ತಾಲೂಕಿನ ಶಿರೂರು ಬಳಿ ಹೆದ್ದಾರಿಯ ಮೇಲೆ ಗುಡ್ಡ ಕುಸಿವಾಗಿ ಸಂಚಾರ ಸ್ಥಗಿತವಾಗಿದ್ದರಿಂದ ಕೊಂಕಣ ರೈಲ್ವೆ ಹೆಚ್ಚುವರಿ ರೈಲು ಸೇವೆ ಒದಗಿಸಿದೆ.
ಗೋವಾಕ್ಕೆ ತೆರಳುವ ಮುಖ್ಯ ಮಾರ್ಗ ಸ್ಥಗಿತವಾಗಿರುವುದನ್ನು ಮನಗಂಡು ಮಾಡಗಾಂವ್ ಜಂಕ್ಷನ್ ಹಾಗೂ ಮಂಗಳೂರು ಜಂಕ್ಷನ್ ನಡುವೆ ರಿಸರ್ವೇಶನ್‌ರಹಿತ ರೈಲು ಓಡಾಟ ಶುರುವಾಗಿದೆ. ಜು. 21 ಹಾಗೂ 22 ರಂದು 2 ಕೇಂದ್ರಗಳ ನಡುವೆ ಈ ರೈಲು ಸಂಚರಿಸಲಿದೆ. ಬೆಳಿಗ್ಗೆ 6 ಗಂಟೆಗೆ ಬೆಳಗ್ಗೆ ಮಡಗಾಂವ್ ಜಂಕ್ಷನ್‌ನಿoದ ಹೊರಡಲಿರುವ ವಿಶೇಷ ರೈಲು ಮಧ್ಯಾಹ್ನ 12:15ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ. ಮರು ಪ್ರಯಾಣದಲ್ಲಿ ಮಧ್ಯಾಹ್ನ 12:40ಕ್ಕೆ ಮಂಗಳೂರು ಜಂಕ್ಷನ್‌ನಿoದ ಹೊರಟು ಸಂಜೆ 7 ಗಂಟೆಗೆ ಮಡಗಾಂವ್ ತಲುಪಲಿದೆ. ನಡುವೆ ಕಾಣಕೋಣ, ಕಾರವಾರ, ಹಾರವಾಡ, ಅಂಕೋಲಾ, ಗೋಕರ್ಣ ರೋಡ್, ಮಿರ್ಜಾನ್, ಕುಮಟಾ, ಹೊನ್ನಾವರ, ಮಂಕಿ, ಮುರುಡೇಶ್ವರ, ಭಟ್ಕಳ, ಶಿರೂರು, ಬೈಂದೂರು, ಬಿಜೂರು, ಸೇನಾಪುರ, ಕುಂದಾಪುರ, ಬಾರ್ಕೂರು, ಉಡುಪಿ, ಮುಲ್ಕಿ, ಸುರತ್ಕಲ್ ಹಾಗೂ ತೋಕೂರು ನಿಲ್ದಾಣಗಳಲ್ಲಿ ನಿಲ್ಲಲಿದೆ.




Discussion about this post