6 Skip to content

ಜಿಲ್ಲೆಗೆ ಬಂದ ಕಂದಾಯ ಸಚಿವರಿಗೆ ಕೋವಿಡ್ ಭಯ!

ಜುಲೈ 20ರ ಸಂಜೆ ಉತ್ತರ ಕನ್ನಡ ಜಿಲ್ಲೆಗೆ ಕಂದಾಯ ಸಚಿವ ಕೃಷ್ಣ ಬೈರೆಗೌಡ ಆಗಮಿಸಿದ್ದಾರೆ. ರಾತ್ರಿ ಅಂಕೋಲಾ ತಾಲೂಕಿನ ಶಿರೂರಿಗೆ ಅವರು ತೆರಳಿ ಪರಿಶೀಲನೆ ನಡೆಸಿದ ಅವರು ಜಿಲ್ಲೆಯಲ್ಲಿಯೇ ರಾತ್ರಿ ಕಳೆದರು.
ಭಾನುವಾರ ಸಹ ಅವರು ಮತ್ತೆ ಶಿರೂರಿಗೆ ತೆರಳಿ ಪರಿಸ್ಥಿತಿ ಅವಲೋಕನ ನಡೆಸಲಿದ್ದಾರೆ. ಕಂದಾಯ ಸಚಿವರ ಪ್ರವಾಸದ ಪಟ್ಟಿಯಲ್ಲಿ `ಕೋವಿಡ್ ಮಾರ್ಗಸೂಚಿ’ ಕಟ್ಟುನಿಟ್ಟಾಗಿ ಅನುಸರಿಸುವ ಬಗ್ಗೆ ಸೂಚಿಸಲಾಗಿದೆ. `ಕಂದಾಯ ಸಚಿವರ ಭದ್ರತೆ, ವಾಸ್ತವ್ಯ ಹಾಗೂ ಶಿಷ್ಟಾಚಾರದ ಜೊತೆ ಅವರ ಪ್ರವಾಸದ ಅವಧಿಯಲ್ಲಿ ಕಟ್ಟುನಿಟ್ಟಾಗಿ ಕೋವಿಡ್ – 19 ನಿಯಮ ಪಾಲಿಸಬೇಕು’ ಎಂದು ಸರ್ಕಾರ ಸೂಚಿಸಿದೆ.
ಆಡಳಿತ ಸುಧಾರಣಾ ಅಧ್ಯಕ್ಷ ಆರ್ ವಿ ದೇಶಪಾಂಡೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿದಂತೆ ಇತರೆ ಗಣ್ಯರು ಜಿಲ್ಲೆಗೆ ಆಗಮಿಸಲಿದ್ದು, ಅವರ ಪ್ರವಾಸ ಯಾದಿಯಲ್ಲಿ ಎಲ್ಲಿಯೂ `ಕೋವಿಡ್ – 19’ನ ಉಲ್ಲೇಖವಿಲ್ಲ.

Leave a comment

Leave a Reply

You cannot copy content of this page