6 Skip to content

ಭೂ ಕುಸಿತ: ಹಿಂದೆ ನಡೆದಿದ್ದೇನು? ದೊರೆತ ಪರಿಹಾರವೇನು?

2021ರಲ್ಲಿ ಯಲ್ಲಾಪುರದ ಕಳೆಚೆಯಲ್ಲಿ ಭಾರೀ ಪ್ರಮಾಣದ ಭೂ ಕುಸಿತ ಆಗಿತ್ತು. ಮುಖ್ಯಮಂತ್ರಿ ಸೇರಿದಂತೆ ರಾಜ್ಯದ ಬಹುತೇಕ ಸಚಿವರು, ಅಧಿಕಾರಿಗಳು ಭೇಟಿ ನೀಡಿದ್ದರು. ಆದರೆ, ಆ ವೇಳೆ ಅವರು ನೀಡಿದ ಯಾವ ಭರವಸೆಗಳು ಈಡೇರಿಲ್ಲ. ಅಲ್ಲಿನವರ ಬದುಕು ಇಂದಿಗೂ ನರಕ!
2009ರಲ್ಲಿ ಕಾರವಾರದ ಕಡವಾಡದಲ್ಲಿ ಭೂ ಕುಸಿತ ಉಂಟಾಗಿತ್ತು. ಆಗ 19 ಜನ ಸಾವನಪ್ಪಿದ್ದರು. ಸಹ ರಾಜ್ಯದ ಮುಖ್ಯಮಂತ್ರಿ ಸೇರಿದಂತೆ ಅನೇಕರು ಆಗಮಿಸಿದ್ದರು. ಅನೇಕ ಭರವಸೆಗಳನ್ನು ನೀಡಿದ್ದರು. 2017ರಲ್ಲಿ ಕುಮಟಾದ ತಂಡ್ರಕುಳಿಯಲ್ಲಿ ಭೂ ಕುಸಿತ ಉಂಟಾಗಿತ್ತು. ಆಗ 3 ಮಕ್ಕಳು ಸಾವನಪ್ಪಿದ್ದರು. 2021ರಲ್ಲಿ ಯಲ್ಲಾಪುರದ ಕಳಚೆ, ಅರಬೈಲ್ ಹಾಗೂ ಜೊಯಿಡಾದ ಅಣಶಿಯಲ್ಲಿ ಭೂ ಕುಸಿತ ಆಗಿತ್ತು. 2022ರಲ್ಲಿ ಭಟ್ಕಳದ ಮುಟ್ಟಳ್ಳಿಯಲ್ಲಿ ಭೂ ಕುಸಿತದಿಂದ 4 ಜನ ಸಾವನಪ್ಪಿದ್ದರು. ಹೊನ್ನಾವರದಲ್ಲಿ ಕೊಂಕಣ ರೈಲ್ವೆ ಕಾಮಗಾರಿ ವೇಳೆ ಕುಸಿತವಾಗಿ 7 ಜನ ಸತ್ತಿದ್ದರು. ಇದೀಗ ಅಂಕೋಲಾದ ಶಿರೂರಿನಲ್ಲಿ ಸಹ ಗುಡ್ಡ ಕುಸಿದಿದ್ದು, ಸಾವನಪ್ಪಿದವರ ಸಂಖ್ಯೆ ಲೆಕ್ಕಕ್ಕೆ ಸಿಗುತ್ತಿಲ್ಲ.
ಕಳೆದ 15 ವರ್ಷದ ಅವಧಿಯಲ್ಲಿ 50ಕ್ಕೂ ಅಧಿಕ ಭೂ ಕುಸಿತ ಪ್ರಕರಣಗಳು ನಡೆದಿದೆ. ಪ್ರತಿ ಬಾರಿಯೂ ತಜ್ಞರಿಂದ ವರದಿ ಪಡೆಯುವ ಸರ್ಕಾರ ಮುಂದಿನ ಕುಸಿತದವರೆಗೆ ಆ ವರದಿಯನ್ನು ಓದುವ ಸಾಹಸವನ್ನು ಮಾಡುತ್ತಿಲ್ಲ. ಅಲ್ಲಲ್ಲಿ ಪರಿಹಾರ, ಪುನರ್ವಸತಿ ಕೆಲಸ ನಡೆಯಿತಾದರೂ ಅದೂ ಪೂರ್ಣ ಪ್ರಮಾಣದಲ್ಲ.

Leave a comment

Leave a Reply

You cannot copy content of this page