ಭಾರತೀಯ ಮಿಲಟರಿ ಪಡೆಯವರು ಮಧ್ಯಾಹ್ನ 2 ಗಂಟೆಯ ವೇಳೆಗೆ ಶಿರೂರಿಗೆ ಆಗಮಿಸಿದ್ದಾರೆ.
ಅವರು ಬೆಳಗ್ಗೆ 6 ಗಂಟೆಗೆ ಆಗಮಿಸಿ, ರಕ್ಷಣಾ ಕಾರ್ಯದಲ್ಲಿ ತೊಡಗುವ ನಿರೀಕ್ಷೆಯಿತ್ತು. ಕೊನೆಗೆ 8 ಗಂಟೆಯ ವೇಳೆಗೆ ಬರುವ ಮುನ್ಸೂಚನೆ ದೊರೆತಿತ್ತು. ಆದರೆ, ಹವಾಮಾನ ವೈಪರಿತ್ಯ ಹಾಗೂ ಇನ್ನಿತರ ಕಾರಣಗಳಿಂದ ಮಿಲಟರಿ ಪಡೆ ಆಗಮಿಸಲು ತಡವಾಗಿದೆ. ಪ್ರಸ್ತುತ ಇಲ್ಲಿನ ಪರಿಸ್ಥಿತಿಯ ಅವಲೋಕನ ನಡೆಸಿದ ಮಿಲಟರಿ ಅಧಿಕಾರಿಗಳು ಅನಾಹುತದ ಆಳ-ಅಗಲದ ಬಗ್ಗೆ ಲೆಕ್ಕಾಚಾರ ಹಾಕಿದ್ದಾರೆ. ತುರ್ತಾಗಿ ಕೈಗೊಳ್ಳಬೇಕಾದ ಕೆಲಸಗಳ ಪಟ್ಟಿ ಮಾಡಿ, ಆದ್ಯತೆಯ ಮೇರೆಗೆ ಕಾರ್ಯಾಚರಣೆ ನಡೆಸಲಿದ್ದಾರೆ. ಮಣ್ಣಿನಲ್ಲಿ ಹುದುಗಿರುವ ಕಾರು ಹಾಗೂ ಲಾರಿಯಲ್ಲಿದ್ದವರನ್ನು ರಕ್ಷಿಸುವ ಪ್ರಯತ್ನ ಮೊದಲು ನಡೆಯಲಿದೆ.
ಪ್ರಧಾನಿ ಕಾರ್ಯಾಲಯದ ಸೂಚನೆ ಮೇರೆಗೆ ಮಿಲಟರಿ ಪಡೆಯವರು ಇಲ್ಲಿಗೆ ಆಗಮಿಸಿದ್ದು, ಎನ್ ಡಿ ಆರ್ ಎಫ್ ಹಾಗೂ ಇನ್ನಿತರ ಸ್ಥಳೀಯ ರಕ್ಷಣಾ ತಂಡದವರ ಜೊತೆಗೂಡಿ ಅವರು ಕಾರ್ಯನಿರ್ವಹಿಸಲಿದ್ದಾರೆ.




Discussion about this post