ರಾಜ್ಯ ಸರ್ಕಾರದ ಉನ್ನತ ಅಧಿಕಾರಿಗಳು ಹಾಗೂ ಸಚಿವ – ಮಾಜಿ ಸಚಿವರ ಜೊತೆ ಹಲವು ಶಾಸಕರು ಶಿರೂರಿನಲ್ಲಿ ಬೀಡು ಬಿಟ್ಟಿದ್ದಾರೆ. ರಸ್ತೆಯ ಒಂದು ಭಾಗ ಮಾತ್ರ ತೆರವಾಗಿದ್ದು, ಇನ್ನೊಂದು ಭಾಗ ತೆರವು ಕಾರ್ಯಾಚರಣೆ ಮುಂದುವರೆದಿದೆ. ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಶಾಸಕ-ಸಚಿವರು ಸಹ ಏನೂ ಮಾಡುವ ಹಾಗಿಲ್ಲ.
ಕೇರಳ ರಾಜ್ಯದ ಲಾರಿ ಚಾಲಕ ಅರ್ಜುನ್ ಇಲ್ಲಿ ಸಿಲುಕಿಕೊಂಡಿರುವ ಕಾರಣ ಅಲ್ಲಿನ 30ಕ್ಕೂ ಅಧಿಕ ಮಾದ್ಯಮದವರು ಆಗಮಿಸಿ ಕಾರ್ಯಾಚರಣೆಯಲ್ಲಿನ ಲೋಪಗಳನ್ನು ಎಳೆಎಳೆಯಾಗಿ ಬಿಚ್ಚಿಡುತ್ತಿದ್ದಾರೆ. ಆರು ದಿನಗಳ ಕಾಲ ಸ್ಥಳೀಯ ಮಣ್ಣಿನೊಳಗೆ ಹುದುಗಿಹೋಗಿದ್ದ ಶಿರೂರು ಗುಡ್ಡ ಪ್ರಕರಣ ಇದೀಗ ರಾಷ್ಟ್ರೀಯ ಸುದ್ದಿಯಾಗಿ ಗಮನ ಸೆಳೆದಿದ್ದು, ರಾಜ್ಯ ಸರ್ಕಾರ ಟೀಕೆಗೆ ಗುರಿಯಾಗಿದೆ.
ಈ ನಡುವೆ ಲಾರಿ ಚಾಲಕ `ಅರ್ಜುನ್ ಮೊಬೈಲ್ ಒಮ್ಮೆ ರಿಂಗಾಗಿತ್ತು. ಆತನಿಂದಲೂ ಕುಟುಂಬದವರಿಗೆ ಮಿಸ್ ಕಾಲ್ ಬಂದಿತ್ತು’ ಎಂಬುದನ್ನು ಕೇರಳ ಸರ್ಕಾರ ಇದನ್ನು ದೃಢಪಡಿಸಿದೆ. ಹೀಗಾಗಿ ಅರ್ಜುನ್ ಬದುಕಿರುವ ಬಗ್ಗೆ ಕುಟುಂಬದವರಿಗೆ ಆಶಾವಾದ ಆವರಿಸಿದೆ. ಮಣ್ಣಿನ ಅಡಿ ಸಿಲುಕಿಕೊಂಡಿರುವ ಬೆಂಜ್ ಲಾರಿ ಇಂಜಿನ್ ಸಹ ಚಾಲು ಸ್ಥಿತಿಯಲ್ಲಿದ್ದ ಬಗ್ಗೆ ಮಾತುಗಳು ಕೇಳಿಬಂದಿದು, ಕಾರಿನಲ್ಲಿದ್ದವರು ಸಹ ಉಸಿರಾಡುತ್ತಿರುವ ಆಶಾಭಾವನೆಯಿದೆ. ಹೀಗಾಗಿ ಮಣ್ಣು ತೆರವಿಗೆ ಸಾಹಸ ಮುಂದುವರೆದಿದ್ದು, ಮುಖ್ಯಮಂತ್ರಿ ಆಗಮನಕ್ಕೂ ಮುನ್ನ ಕಂದಾಯ ಸಚಿವ ಕೃಷ್ಣಬೈರೆ ಗೌಡ ಹಾಗೂ ಮಾಜಿ ಸಚಿವ ಆರ್ ವಿ ದೇಶಪಾಂಡೆ ಆಗಮಿಸಿ ಪರಿಸ್ಥಿತಿ ಅವಲೋಕಿಸಿದ್ದಾರೆ.
ಈ ಕುರಿತಾದ ವಿಡಿಯೋ ಇಲ್ಲಿ ನೋಡಿ..




Discussion about this post