`ನಾನು ರಾಜಕಾರಣ ಮಾಡಲು ಜಿಲ್ಲೆಗೆ ಬಂದಿಲ್ಲ. ಅಪಾಯ ಸನ್ನಿವೇಶದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಶಿರೂರು ಗುಡ್ಡ ಕುಸಿತ ಸ್ಥಳ ಪರಿಶೀಲನೆ ನಡೆಸಿದ ನಂತರ ಮಾದ್ಯಮದವರ ಜೊತೆ ಮಾತನಾಡಿದ ಅವರು `ರಾಜ್ಯ ಸರ್ಕಾರ ಎಲ್ಲಿಯೂ ನಿರ್ಲಕ್ಷö್ಯ ಮಾಡಿಲ್ಲ. ವಿಳಂಬ ಮಾಡಿಲ್ಲ’ ಎಂದರು. `ಕೇರಳದ ಅರ್ಜುನ್ ರಕ್ಷಣೆಗೆ ಅಲ್ಲಿನ ಜನ ಬಂದಿದ್ದಾರೆ. ಆದರೆ, ನಾವು ಸಹ ಆತನ ರಕ್ಷಣೆಯ ಪ್ರಯತ್ನದಲ್ಲಿದ್ದೇವೆ’ ಎಂದರು. ಅಪೂರ್ಣ ಕಾಮಗಾರಿ, ಅವೈಜ್ಞಾನಿಕ ಕಾಮಗಾರಿ ವಿರುದ್ಧ ದೂರು ಬಂದಿದೆ. ರಕ್ಷಣೆ ಮುಗಿದ ನಂತರ ಇದಕ್ಕೆ ಕಾರಣರಾದವರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ. ಯಾರೇ ತಪ್ಪು ಮಾಡಿದರೂ ಬಿಡಲ್ಲ. ಐ ಆರ್ ಬಿ ಕಂಪನಿ ವಿರುದ್ಧ ಸಹ ಕಠಿಣ ಕ್ರಮ ಅನಿವಾರ್ಯ’ ಎಂದರು. `ಅತಿ ದೊಡ್ಡ ಪ್ರಮಾಣದಲ್ಲಿ ಗುಡ್ಡ ಕುಸಿದಿದೆ. ಮಣ್ಣು ತೆರವು ನಡೆಯುತ್ತಿದೆ. ರಕ್ಷಣಾ ಕಾರ್ಯಚರಣೆ ನಡೆಯುತ್ತಿದೆ’ ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದ ವಿಡಿಯೋ ಇಲ್ಲಿ ನೋಡಿ..




Discussion about this post