ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತ ಪ್ರದೇಶಕ್ಕೆ ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿದ್ದು, ರಾಡಿ ಮಣ್ಣಿನಲ್ಲಿ `ಗಂ ಬೂಟ್’ ಧರಿಸಿ ಸಂಚರಿಸಿದರು.
ಗುಡ್ಡ ಕುಸಿದ ಸ್ಥಳ ಪರಿಶೀಲಿಸಿದ ಅವರು ಇನ್ನಷ್ಟು ಗುಡ್ಡ ಕುಸಿಯುವ ಸಾಧ್ಯತೆ ಬಗ್ಗೆ ತಿಳಿದು ಆತಂಕಕ್ಕೆ ಒಳಗಾದರು
ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು ಗುಡ್ಡ ಕುಸಿತದ ಕಾರಣಗಳ ಬಗ್ಗೆ ಅವಲೋಕಿಸಿದರು. ಸ್ಥಳದಲ್ಲಿದ್ದ ಹಿರಿಯ ಅಧಿಕಾರಿಗಳು ಇಲ್ಲಿನ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿದರು. ಈವರೆಗೆ ದೊರೆತ ಶವ ಹಾಗೂ ಕಾಣೆಯಾದವರ ಬಗ್ಗೆ ಲಭ್ಯವಿರುವ ಮಾಹಿತಿಗಳ ಬಗ್ಗೆ ವಿವರಿಸಿದರು. ಬೆಳಗ್ಗೆಯೇ ಆಗಮಿಸಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಮುಖ್ಯಮಂತ್ರಿಗಳಿಗೆ ಆಗು-ಹೋಗುಗಳ ಬಗ್ಗೆ ಮಾಹಿತಿ ನೀಡಿದರು. ಈ ವೇಳೆ ಅಲ್ಲಿ ಹಾಜರಿದ್ದ ಜನ ಸಹ ತಮ್ಮ ಅಹವಾಲುಗಳನ್ನು ಸಲ್ಲಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಶಿರೂರಿಗೆ ಆಗಮಿಸಿದ ವಿಡಿಯೋ ಇಲ್ಲಿ ನೋಡಿ..




Discussion about this post