2009ರಿಂದಲೂ ಉತ್ತರ ಕನ್ನಡ ಜಿಲ್ಲೆಯಲ್ಲಿ ನಿರಂತರ ಗುಡ್ಡ ಕುಸಿಯುತ್ತಿದ್ದು, ಹಲವಾರು ಸಾವು-ನೋವುಗಳು ಉಂಟಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಉತ್ತರ ಕನ್ನಡ ಜಿಲ್ಲಾ ಸಂಚಾರದ ವೇಳೆ ಈ ಬಗ್ಗೆ ಮಾಹಿತಿ ಪಡೆದಿದ್ದು, ಶಿರೂರು ಗುಡ್ಡ ಕುಸಿತ ಸೇರಿದಂತೆ ಹಿಂದಿನ ಘಟನಾವಳಿಗಳ ಬಗ್ಗೆಯೂ ಕೇಂದ್ರಕ್ಕೆ ವರದಿ ಸಲ್ಲಿಸುವ ಭರವಸೆ ಮೂಡಿಸಿದೆ.
ಪ್ರಸ್ತುತ ಶಿರೂರು ಗುಡ್ಡ ಕುಸಿತಕ್ಕೆ ಅವೈಜ್ಞಾನಿಕ ಹೆದ್ದಾರಿ ಕಾಮಗಾರಿ ಕಾರಣ ಎಂಬ ಆರೋಪ ದಟ್ಟವಾಗಿದೆ. ಚತುಷ್ಪದ ಹೆದ್ದಾರಿ ನಿರ್ಮಾಣ ಕೆಲಸ ಕೇಂದ್ರ ಸರ್ಕಾರದ ಅಧೀನದಲ್ಲಿ ನಡೆಯುತ್ತಿದ್ದು, ಕೇಂದ್ರ ಸಚಿವರೊಬ್ಬರಿಗೆ ಸೇರಿದ ಕಂಪನಿಯ ಪಾಲುದಾರಿಕೆಯಲ್ಲಿ ಈ ಅಭಿವೃದ್ಧಿ ನಡೆಸಿರುವ ಆರೋಪಗಳಿವೆ. ಇಲ್ಲಿನ ಜನರ ಆಕ್ರೋಶದ ಬಗ್ಗೆ ವಿಜಯೇಂದ್ರ ಅವರ ಅರಿವಿಗೆ ಬಂದಿದ್ದು ವಸ್ತುಸ್ಥಿತಿಯನ್ನು ಅವರು ಕೇಂದ್ರಕ್ಕೆ ಮುಟ್ಟಿಸುವ ಸಾಧ್ಯತೆಗಳಿದೆ.
ಇನ್ನೂ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಸಹ ಗುಡ್ಡ ಕುಸಿತ ಪ್ರದೇಶದ ವೀಕ್ಷಣೆ ನಡೆಸಿದ್ದಾರೆ. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಅಲ್ಲಿಗೆ ತೆರಳಿ ಪರಿಸ್ಥಿತಿ ಅವಲೋಕಿಸಿದ್ದಾರೆ. ಅವರೆಲ್ಲರ ಪ್ರಯತ್ನದಿಂದ ಮಿಲಟರಿ ಪಡೆಯವರು ಶಿರೂರಿಗೆ ಆಗಮಿಸಿ ಗುಡ್ಡ ತೆರವು ಹಾಗೂ ಅಲ್ಲಿ ಸಿಲುಕಿದವರನ್ನು ಬದುಕಿಸುವ ಪ್ರಯತ್ನ ಮುಂದುವರೆಸಿದ್ದಾರೆ.
ಇಲ್ಲಿನ ಸಂತ್ರಸ್ತರ ನೋವು, ಈವರೆಗೆ ನಡೆದ ಅವಾಂತರಗಳು, ಪ್ರಸ್ತುತ ಸನ್ನಿವೇಶದ ಬಗ್ಗೆ ಈ ಎಲ್ಲರೂ ಒಟ್ಟಿಗೆ ಪ್ರಯತ್ನ ನಡೆಸಿದರೆ ಗುಡ್ಡಗಾಡನ್ನು ಸಂರಕ್ಷಿಸುವ ಜೊತೆ ಉತ್ತರ ಕನ್ನಡ ಜಿಲ್ಲೆಗೆ ಕೇಂದ್ರದಿAದ ವಿಶೇಷ ಪ್ಯಾಕೇಜ್ ಘೋಷಣೆಯಾಗುವ ಸಾಧ್ಯತೆಗಳನ್ನು ಅಲ್ಲಗಳೆಯುವ ಹಾಗಿಲ್ಲ.




Discussion about this post