ಕಾರವಾರ ಜಿಲ್ಲಾ ಪಂಚಾಯತ ಸಭಾಭವನಕ್ಕೆ ಆಗಮಿಸುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ತಲೆಬಾಗಿ ನಮಸ್ಕರಿಸಿದ್ದು, ನಂತರ ಶಾಲು ಹೊದೆಸಿ ಗೌರವಿಸಿದರು.
ಇದಾದ ನಂತರ ಬನವಾಸಿ ಹೋಬಳಿಯ ಮೊಗವಳ್ಳಿ ಗ್ರಾಮದಲ್ಲಿನ ಉಂಟಾದ ಸಮಸ್ಯೆಯ ಬಗ್ಗೆ ಮುಖ್ಯಮಂತ್ರಿಗಳಿಗೆ ಅವರು ಮನವರಿಕೆ ಮಾಡಿದರು. `ಪ್ರತಿ ವರ್ಷ ಮಳೆಗಾಲದಲ್ಲಿ ಈ ಭಾಗದ ವಸತಿ ಪ್ರದೇಶಗಳಿಗೆ ನೀರು ನುಗ್ಗುತ್ತದೆ. ಇದರಿಂದ ಜನ ಜೀವನಕ್ಕೆ ತೊಂದರೆ ಆಗುತ್ತಿದ್ದು, ಮೊಗವಳ್ಳಿ ನದಿ ತೀರ ಪ್ರದೇಶದ ಜನರ ವಾಸ್ತವ್ಯಕ್ಕಾಗಿ ಬೇರೆ ಜಾಗ ನೀಡಬೇಕು’ ಎಂದು ಮನವಿ ಸಲ್ಲಿಸಿದರು.
ಇದಕ್ಕೆ ಸಿದ್ದರಾಮಯ್ಯ ಪೂರಕವಾಗಿ ಸ್ಪಂದಿಸಿದ್ದು, ಬೇರೆ ಜಾಗ ಗುರುತಿಸಿ ಪ್ರಸ್ತಾವನೆ ಸಲ್ಲಿಸುವಂತೆ ಅರಣ್ಯ ಹಾಗೂ ಕಂದಾಯ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚಿಸಿದರು.




Discussion about this post