ಶಿರೂರು ಗುಡ್ಡದ ತಪ್ಪಲಿನಲ್ಲಿ ಮಣ್ಣಿನ ಅಡಿ ಲಾರಿ ಸಿಲುಕಿದ ಸಾಧ್ಯತೆಗಳಿಲ್ಲ. ಈ ಬಗ್ಗೆ ಕಂದಾಯ ಸಚಿವ ಕೃಷ್ಣ ಬೈರೆಗೌಡ ಮಾಹಿತಿ ನೀಡಿದ್ದಾರೆ.
`ತಮ್ಮ ಅನುಭವಗಳ ಪ್ರಕಾರ ಇಲ್ಲಿ ಲಾರಿ ಇಲ್ಲ. ಅದು ಗಂಗಾವಳಿ ನದಿಯಲ್ಲಿ ಮುಳುಗಿದ ಸಾಧ್ಯತೆ ಹೆಚ್ಚಿದೆ’ ಎಂದು ಕಂದಾಯ ಸಚಿವ ಕೃಷ್ಣ ಬೈರೆಗೌಡ ಹೇಳಿದ್ದಾರೆ. ಸ್ಥಳಕ್ಕೆ ಆಗಮಿಸಿದ ಎನ್ ಡಿ ಆರ್ ಎಫ್, ಮಿಲಟರಿ ಪಡೆ ಹಾಗೂ ನೌಕಾದಳದವರು ಸಹ ಇದೇ ಅಭಿಪ್ರಾಯ ಪಟ್ಟಿದ್ದಾರೆ. ಲಾರಿ ಇದ್ದರೆ ಈ ವೇಳೆಗಾಗಲೇ ಅದು ಕಾಣಿಸಬೇಕಿತ್ತು’ ಎಂದವರು ಹೇಳಿದ್ದಾರೆ. ಇಷ್ಟು ದಿನಗಳ ಕಾರ್ಯಾಚರಣೆ ನಡೆಸಿದರೂ ಲಾರಿ ಪತ್ತೆಯಾಗದ ಕಾರಣ ಅವರು ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಲಾರಿ ಹುಡುಕಾಟಕ್ಕೆ ಇದೀಗ ಮುಳುಗು ತಜ್ಞರನ್ನು ಕರೆಯಿಸುವ ಸಾಧ್ಯತೆಗಳಿವೆ.




Discussion about this post