ಹೊನ್ನಾವರ: ಮಂಕಿ ಗ್ರಾಮದ ಮಂಕಾಳಿ ಮಂಜಯ್ಯ ನಾಯ್ಕ ಎಂಬಾತರು ಮೂತ್ರ ವಿಸರ್ಜನೆಗೆ ಹೋದಾಗ ಗಾಯಗೊಂಡು ಸಾವನಪ್ಪಿದ್ದಾರೆ.
ಮಂಕಿ ಹೊಸಪಟ್ಟಣ ಪಳ್ಳಿಬಿದರೆಯ ಮಂಕಾಳಿ ನಾಯ್ಕ (70) ಜುಲೈ 20ರ ರಾತ್ರಿ 10 ಗಂಟೆಗೆ ಊಟ ಮಾಡಿ ಮಲಗಿದ್ದರು. ಜುಲೈ 21ರ ನಸುಕಿನ 3 ಗಂಟೆಗೆ ಶೌಚಾಲಯಕ್ಕೆ ತೆರಳಿದ್ದರು. ಅಲ್ಲಿ ಗೋಡೆ ಬಡಿದು ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ಮಗ ದಿನೇಶ್ ನಾಯ್ಕ ಆಸ್ಪತ್ರೆಗೆ ಸೇರಿಸಿದ್ದರು. ಬೆಳಗ್ಗೆ 7.30ರ ವೇಳೆಗೆ ವೈದ್ಯರು ಮಂಕಾಳಿ ಸಾವನಪ್ಪಿದ ಬಗ್ಗೆ ಘೋಷಿಸಿದ್ದಾರೆ.
Discussion about this post