ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಅಲ್ಪ ಪ್ರಮಾಣದಲ್ಲಿ ಕಡಿಮೆ ಆಗಿದ್ದರೂ ಮಕ್ಕಳು ಶಾಲೆಗೆ ಬರುವ ವಾತಾವರಣ ನಿರ್ಮಾಣವಾಗಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ `ಯಾವುದೇ ಅಪಾಯ ಆಗದಂತೆ ಮುನ್ನಚ್ಚರಿಕೆವಹಿಸಿ’ ಎಂದು ಸೂಚಿಸಿದ್ದು, ಶಿರಸಿ ಶೈಕ್ಷಣಿಕ ಜಿಲ್ಲೆಗೆ ಶಿಕ್ಷಣಾಧಿಕಾರಿಗಳೇ ರಜೆ ಘೋಷಿಸಿದ್ದಾರೆ.
ಆದರೆ, ಕಾರವಾರ ಶೈಕ್ಷಣಿಕ ಜಿಲ್ಲೆಗೆ ಸಂಬAಧಿಸಿ ರಾತ್ರಿ 8.30ರವರೆಗೂ ರಜೆ ಘೋಷಣೆಯಾಗಿಲ್ಲ. `ಕಾರವಾರ ಶೈಕ್ಷಣಿಕ ಜಿಲ್ಲೆಗೆ ಶಿಕ್ಷಕರು ಶಾಲೆಗೆ ಬರಬೇಕು. ಮಕ್ಕಳು ಬರುವ ಅಗತ್ಯವಿಲ್ಲ’ ಎನ್ನುವ ಬಗ್ಗೆ ಚರ್ಚೆ ನಡೆದಿದ್ದು, ಜಿಲ್ಲಾಧಿಕಾರಿ ಆದೇಶದ ನಂತರ ಈ ಗೊಂದಲ ನಿವಾರಣೆ ಆಗಲಿದೆ.
Discussion about this post