ನವದೆಹಲಿ: ತ್ರಿಪುರಾ ಬಳಿಯಿರುವ ಅಗರ್ತಲಾದ ಜೋಯ್‌ನಗರದ ಸುಪ್ರಭಾ ಬಾಲ್ ಎಂಬಾಕೆ ಹಣ ಕದ್ದ ಕಾರಣಕ್ಕೆ ತನ್ನ ಮಗನ ಕತ್ತು ಹಿಸುಕಿದ್ದಾಳೆ. ಪೊಲೀಸರು ಸ್ಥಳಕ್ಕೆ ಬಂದಾಗ ಶವದ ಮುಂದೆ ಆಕೆ ಕುಳಿತಿದ್ದು, ತನ್ನ ತಪ್ಪು ಒಪ್ಪಿಕೊಂಡಿದ್ದಾಳೆ.
ಕಟ್ಟಡ ನಿರ್ಮಾಣ ಸ್ಥಳದಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದ ಸುಪ್ರಭಾ ಬಾಲ್ ಜೊತೆ ಆಕೆಯ ಮಗ ರಾಜ್ ದೀಪ್ ವಾಸವಾಗಿದ್ದ. ಆತನ ವರ್ತನೆಯಿಂದ ಬೇಸತ್ತಿದ್ದ ಸುಪ್ರಭಾ ಆತ ಹಣ ಕದಿಯುತ್ತಿರುವುದನ್ನು ನೋಡಿ ಕತ್ತು ಹಿಸುಕಿದ್ದು, ಆತ ಅಲ್ಲಿಯೇ ಸಾವನಪ್ಪಿದ್ದಾನೆ.
Discussion about this post