ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ನಟ ದರ್ಶನ್’ರ ಅಭಿಮಾನಿ.
ಲಕ್ಷ್ಮೀವೆಂಕಟೇಶ್ವರ ಬಡಾವಣೆಯಲ್ಲಿ ವಾಸವಿದ್ದ ಈತ ದರ್ಶನ್ ಅಭಿಯಿಸಿದ್ದ ಯಾವ ಸಿನಿಮಾವನ್ನು ಸಹ ನೋಡದೇ ಇರುತ್ತಿರಲಿಲ್ಲ. ಅಪೋಲೊ ಮೆಡಿಕಲ್’ನಲ್ಲಿ ಕೆಲಸ ಮಾಡುತ್ತಿದ್ದ ಈತ ಅಲ್ಪ ಆದಾಯದಲ್ಲಿಯೇ ಕುಟುಂಬವನ್ನು ನೋಡಿಕೊಳ್ಳುತ್ತಿದ್ದ. ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ ಸಿಟ್ಟಿನಲ್ಲಿ ದರ್ಶನ್ ಮತ್ತು ಅವರ ಗೆಳೆಯರು 33 ವರ್ಷದ ರೇಣುಕಾ ಸ್ವಾಮಿಯನ್ನು ಅಪಹರಿಸಿ ಕೊಲೆ ಮಾಡಿದ್ದು, ಬೆಂಗಳೂರಿನ ಕಾಮಾಕ್ಷಿಪಾಳ್ಯದ ಪಟ್ಟಣಗೆರೆ ಜಯಣ್ಣ ಅವರಿಗೆ ಸೇರಿದ ಶೆq ಒಳಗೆ ಆತನ ಮೇಲೆ ಹಲ್ಲೆ ನಡೆದಿತ್ತು.
Discussion about this post