ಜೊಯಿಡಾ: ಲೋಂಡಾ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಸಭೆ ಮುಗಿಸಿ ಮರಳುತ್ತಿದ್ದ ಆಶಾ ಕಾರ್ಯಕತೆ ಲಕ್ಷ್ಮೀ ಜರಂಬೆಕರ್ ಎಂಬಾತರು ಬೈಕಿನಿಂದ ಬಿದ್ದು ಸಾವನಪ್ಪಿದ್ದಾರೆ.
ಜುಲೈ 22ರಂದು ಲೋಂಡಾ ಸರ್ಕಾರಿ ಆಸ್ಪತ್ರೆಯಲ್ಲಿ ಸಭೆ ನಡೆದಿತ್ತು. ಅದರಲ್ಲಿ ಭಾಗವಹಿಸಿದ್ದ ಆಶಾ ಕಾರ್ಯಕರ್ತೆ ನಂತರ ಪರಶುರಾಮ ಗಾವಡಾ ಎಂಬಾತರ ಬೈಕ್ ಏರಿ ಬೆಳಗಾವಿ-ಪಣಜಿ ಹೆದ್ದಾರಿಯಲ್ಲಿ ಹೊರಟಿದ್ದರು. ರಾಮನಗರದ ಪಟೇಲರ ಹಾರ್ಡವೇರ್ ಅಂಗಡಿ ಬಳಿ ಬೈಕಿನಿಂದ ನೆಲಕ್ಕೆ ಬಿದ್ದಿದ್ದು, ತಲೆಯಿಂದ ರಕ್ತ ಸೋರುತ್ತಿತ್ತು. ರಾಮನಗರ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿ ಹೆಚ್ಚಿನ ಚಿಕಿತ್ಸೆಗೆ ಖಾನಾಪುರಕ್ಕೆ ತೆರಳುತ್ತಾಗ ಖಾನಾಪುರದ ಬಳಿ ಕುತ್ತಿಗೆ ಹೊರಳಿಸಿದ್ದು, ಸಂಜೆ 7 ಗಂಟೆ ವೇಳೆಗೆ ವೈದ್ಯರು ಅವರು ಸಾವನಪ್ಪಿರುವುದಾಗಿ ಘೋಷಿಸಿದರು.




Discussion about this post