ಕಾರವಾರ – ಇಳಕಲ್ ರಾಜ್ಯ ಹೆದ್ದಾರಿಗೆ ಹೊಂದಿಕೊoಡು ಅಪಾಯಕಾರಿ ರೀತಿಯಲ್ಲಿ ಮರಗಳಿದ್ದು, ಇದನ್ನು ತೆರವು ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಕಡವಾಡ ನಂದವಾಳದಿoದ ಮಾರುತಿ ದೇವಸ್ಥಾನ ತಿರುವಿನವರೆಗೆ ಎರಡು ಕಡೆ ದೊಡ್ಡ ದೊಡ್ಡ ಮರಗಳಿವೆ. ಅದರಲ್ಲಿಯೂ ಹಳೆಯದಾದ ಎರಡು ಮಾವಿನಮರ ಹಾಗೂ ಒಂದು ಹುಣಸೆಮರ ಬೀಳುವ ಹಂತದಲ್ಲಿದೆ. ಈ ಮಾರ್ಗದಲ್ಲಿ ಸಾಕಷ್ಟು ವಾಹನ ಸಂಚರಿಸುತ್ತಿದ್ದು, ಅಪಾಯ ಆಗುವ ಮೊದಲು ಇದನ್ನು ತೆರವು ಮಾಡಬೇಕು ಎಂದು ಜನ ಒತ್ತಾಯಿಸಿದ್ದಾರೆ. ಈ ಭಾಗದಲ್ಲಿ ಅಂಗನವಾಡಿ ಸಹ ಇದ್ದು, ಅಲ್ಲಿ ಮಕ್ಕಳನ್ನು ಕಳುಹಿಸಲು ಪಾಲಕರು ಹೆದರುತ್ತಿದ್ದಾರೆ. ಹಾದು ಹೋಗಿರುವ ವಿದ್ಯುತ್ ತಂತಿಗಳ ಮೇಲೆ ಮರ ಬಿದ್ದರೆ ಇನ್ನಷ್ಟು ಅಪಾಯ ಎದುರಾಗಲಿದ್ದು, ಕೂಡಲೇ ಮರ ತೆರವು ಮಾಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜಾ ನಾಯ್ಕ ಕಡವಾಡ ಆಗ್ರಹಿಸಿದ್ದಾರೆ.




Discussion about this post