ಶಿರೂರು ಗುಡ್ಡ ಕುಸಿತದ ಪರಿಣಾಮ ರಾಷ್ಟ್ರೀಯ ಹೆದ್ದಾರಿಯಲ್ಲಿನ ವಾಹನ ಸಂಚಾರ ಅಸ್ತವ್ಯಸ್ಥಗೊಂಡಿದ್ದು, ಹಿಲ್ಲೂರು ಮಾರ್ಗದಿಂದ ಲಾರಿಗಳನ್ನು ಬಿಡಲಾಗುತ್ತಿದೆ. ಮೊದಲೇ ಹೊಂಡಮಯವಾಗಿದ್ದ ಹಿಲ್ಲೂರು ರಸ್ತೆ ಇದೀಗ ಇನ್ನಷ್ಟು ಹದಗೆಟ್ಟಿದೆ.
ರಾಷ್ಟ್ರೀಯ ಹೆದ್ದಾರಿಗಿಂತಲೂ ಈ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುವುದು 20ಕಿಮೀ ಉಳಿತಾಯ. ಜೊತೆಗೆ ತುರ್ತು ಸನ್ನಿವೇಶಗಳಲ್ಲಿ ಈ ರಸ್ತೆ ಅನಿವಾರ್ಯ. ಹೀಗಾಗಿ ಶಿರೂರು ಗುಡ್ಡ ಕುಸಿತದ ಕಾರಣದಿಂದ ದೊಡ್ಡ ದೊಡ್ಡ ಲಾರಿಗಳು ಈ ರಸ್ತೆ ಮೂಲಕ ತಿರುಗುತ್ತಿದ್ದು, ಮೊದಲೇ ಹದಗೆಟ್ಟ ರಸ್ತೆ ಇದೀಗ ದುಸ್ಥಿತಿಯ ಹಂತ ತಲುಪಿದೆ.
ಸುಂಕಸಾಳದಿoದ ಹಿಲ್ಲೂರು ಮಾರ್ಗವಾಗಿ ತೆರಳಿ ಮಾದನಗೇರಿ ಬಳಿ ರಾಷ್ಟ್ರೀಯ ಹೆದ್ದಾರಿ ಕೂಡುವ ಈ ರಸ್ತೆ ಅಗಲವೂ ಕಡಿಮೆ. ರಸ್ತೆಯ ಗುಣಮಟ್ಟ ಸಹ ಸರಿಯಾಗಿಲ್ಲ. ಪ್ರಸ್ತುತ ದೊಡ್ಡ ದೊಡ್ಡ ಲಾರಿಗಳನ್ನು ಈ ರಸ್ತೆ ಮೂಲಕ ಬಿಡುತ್ತಿರುವುದರಿಂದ ಸಾಮರ್ಥ್ಯಕ್ಕಿಂತಲೂ ಅಧಿಕ ಹೊರೆ ರಸ್ತೆ ಮೇಲೆ ಬಿದ್ದಿದ್ದು, ಹೊಂಡಗಳ ಆಳ-ಅಗಲ ಹೆಚ್ಚಾಗಿದೆ. ಕಳೆದ 9 ದಿನಗಳಿಂದ ಪೊಲೀಸರು ಹಾಗೂ ಲೋಕೋಪಯೋಗಿ ಇಲಾಖೆಯವರು ರಸ್ತೆಗೆ ಕಲ್ಲು ಹಾಕುತ್ತಿದ್ದಾರೆ. ಗ್ರಾಮಸ್ಥರು ದೊಡ್ಡ ದೊಡ್ಡ ಹೊಂಡಗಳಿಗೆ ಮಣ್ಣು ತುಂಬಿದ್ದಾರೆ. ಆದರೂ, ಹೊಂಡ ಮುಚ್ಚಿದ ಹಾಗೇ ಒನ್ನೊಂದು ಹೊಂಡ ಸೃಷ್ಠಿಯಾಗುತ್ತಿದೆ.
ಇದರ ಪರಿಣಾಮ ಈ ಮಾರ್ಗದಲ್ಲಿ ನಿತ್ಯ ಸಂಚರಿಸಬೇಕಿದ್ದ ಮರಕಾಲು, ಗುಮಡಬಾಳ, ಆಂದ್ಲೆ, ಮೊರಳ್ಳಿ, ಮೊಗಟಾ ಸೇರಿದಂತೆ ಸುತ್ತಲಿನ ಭಾಗದ ಜನ ನಲುಗಿದ್ದಾರೆ.





Discussion about this post