ಭಟ್ಕಳ: ಹಾಡುವಳ್ಳಿ ಭಾಗದ ಹಲವು ಕಡೆ ಗಾಳಿ-ಮಳೆಗೆ ಅಡಿಕೆ, ತೆಂಗು ನೆಲ ಕಚ್ಚಿದೆ. ಮನೆಗಳಿಗೆ ಹಾನಿಯಾಗಿದೆ. ಭಾನುವಾರ ಸಚಿವ ಮಂಕಾಳು ವೈದ್ಯ ಆ ಭಾಗಕ್ಕೆ ಸಂಚರಿಸಿದ್ದು, ಸಚಿವರ ಮುಂದೆಯೇ ಜನ ಅಧಿಕಾರಿಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
`ಈವರೆಗೂ ಅಧಿಕಾರಿಗಳು ಭೇಟಿ ನೀಡಿಲ್ಲ. ಇದೀಗ ಸಚಿವರ ಜೊತೆ ಬಂದಿದ್ದಾರೆ. ಪರಿಹಾರವನ್ನು ವಿತರಿಸಿಲ್ಲ’ ಎಂದು ಜನ ದೂರಿದರು. ಹಾಡವಳ್ಳಿ ಗ್ರಾಮದ ಹಿರೇಬೀಳು ಮಜಿರೆಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಹಾನಿಯಾಗಿದ್ದು ಮಂಕಾಳು ವೈದ್ಯ ಜನರ ಅಹವಾಲು ಆಲಿಸಿದರು. ಅಧಿಕಾರಿಗಳಿಗೆ ಸರ್ವೆ ನಡೆಸಿ, ಪರಿಹಾರ ಒದಗಿಸುವಂತೆ ಸೂಚಿಸಿದರು.
Discussion about this post