ಕುಮಟಾ: `ಮಳೆಹಾನಿಗೆ ನೀಡುವ ನೆರವಿನ ಮೊತ್ತವನ್ನು ಸರ್ಕಾರ ಕಡಿಮೆ ಮಾಡಿದ್ದು, ಅದನ್ನು ಹೆಚ್ಚಳ ಮಾಡಬೇಕು’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆಗ್ರಹಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು `ಹಿಂದೆ ಬಿಜೆಪಿ ಸರ್ಕಾರ ಮನೆಯೊಗೆ ನೀರು ನುಗ್ಗಿದರೆ 10 ಸಾವಿರ ಕೊಡುತ್ತಿತ್ತು. ಈಗಿನ ಸರ್ಕಾರ ಅದನ್ನು 5 ಸಾವಿರಕ್ಕೆ ಇಳಿಸಿದೆ. ಮನೆ ಕಳೆದುಕೊಂಡವರಿಗೆ 5 ಲಕ್ಷ ಕೊಡಲಾಗುತ್ತಿತ್ತು. ಅದನ್ನು 1.5 ಲಕ್ಷಕ್ಕೆ ಇಳಿಸಲಾಗಿದೆ. ಈ ಬಗ್ಗೆ ನಾನು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದು, ಈವರೆಗೂ ಪ್ರತಿಕ್ರಿಯೆ ಬಂದಿಲ್ಲ’ ಎಂದು ದೂರಿದರು. `ಮಳೆ ಶುರುವಾದ ದಿನದಿಂದ ಈವರೆಗೆ ತೊಂದರೆ ಅನುಭವಿಸಿದ ಎಲ್ಲರಿಗೂ ಹೆಚ್ಚಿನ ಪರಿಹಾರ ಸಿಗಬೇಕು’ ಎಂದು ಆಗ್ರಹಿಸಿದರು.
ಶಾಸಕ ದಿನಕರ ಶೆಟ್ಟಿ, ನ್ಯಾಯವಾದಿ ನಾಗರಾಜ ನಾಯಕ, ಪ್ರಮುಖರಾದ ಸೂರಜ ನಾಯ್ಕ ಸೋನಿ ಇತರರು ಇದ್ದರು.
Discussion about this post