ಕುಮಟಾ: ಕೆಆರ್‌ಎಸ್ ಪಕ್ಷದ ಉತ್ತರ ಕನ್ನಡ ಜಿಲ್ಲಾ ಅಧ್ಯಕ್ಷರಾಗಿ ವಿನಾಯಕ ನಾಯ್ಕ ಕಾರವಾರ ಆಯ್ಕೆಯಾಗಿದ್ದಾರೆ.
ಭಾನುವಾರ ನಡೆದ ಸಭೆಯಲ್ಲಿ ಸರ್ವ ಸದಸ್ಯರು ಒಕ್ಕೂರಲಿನಿಂದ ಅವರನ್ನು ಚುನಾಯಿಸಿದರು. ಉಪಾಧ್ಯಕ್ಷರಾಗಿ ತಿಮ್ಮಯ ನಾಯ್ಕ ಭಟ್ಕಳ, ಪ್ರಧಾನ ಕಾರ್ಯದರ್ಶಿಯಗಿ ರಂಜಿತಾ ಬಾನಾವಳಿಕರ್ ಅಂಕೋಲಾ, ಸಂಘಟನಾ ಕಾರ್ಯದರ್ಶಿಯಾಗಿ ಪ್ರವೀಣ್ ಕುಮಾರ್ ಆರ್ ಶೆಟ್ಟಿ ಕುಮಟಾ ಆಯ್ಕೆಯಾಗಿದ್ದಾರೆ. ಈ ವೇಳೆ ವಿವಿಧ ತಾಲೂಕು ಘಟಕದವರ ಆಯ್ಕೆ ಪ್ರಕ್ರಿಯೆ ಸಹ ನಡೆಯಿತು.
Discussion about this post