ಯಲ್ಲಾಪುರ: `ಅತಿಕ್ರಮಣದಾರರ ಸಮಸ್ಯೆ ಬಗೆಹರಿಸುವುದಕ್ಕಾಗಿಯೇ ಅವರೆಲ್ಲರೂ ನನ್ನನ್ನು ಬೆಂಬಲಿಸಿ ಸಂಸದನಾಗಿ ಮಾಡಿದ್ದು, ಕಾನೂನಿನಲ್ಲಿರುವ ದೋಷಗಳನ್ನು ಸರಿಪಡಿಸಿ ಹಳೆಯ ಅತಿಕ್ರಮಣದಾರರಿಗೆ ಭೂಮಿ ಮಂಜೂರಾತಿಗೆ ನೆರವು ನೀಡಲು ಬದ್ಧ’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು `ಅರಣ್ಯ ಅತಿಕ್ರಮಣದಾರರಿಗೆ ಭೂಮಿಯ ಪಟ್ಟಾ ವಿತರಿಸಲು 2006ರ ಕಾನೂನಿನಲ್ಲಿ ಕೆಲ ಸಮಸ್ಯೆಗಳಿವೆ. ಈ ಬಗ್ಗೆ ಕೇಂದ್ರ ಅರಣ್ಯ ಸಚಿವರ ಜೊತೆ ಚರ್ಚೆ ಮಾಡಿದ್ದು, ಆ ಸಮಸ್ಯೆ ಬಗೆಹರಿಸುವುದಕ್ಕಾಗಿ ನಾನು ಸಂಸದನಾಗಿದ್ದೇನೆ’ ಎಂದು ಹೇಳಿದರು. `ಯಾರೂ ಹೊಸ ಅತಿಕ್ರಮಣ ಮಾಡಬೇಡಿ’ ಎಂದು ಈ ವೇಳೆ ಕಿವಿಮಾತು ಹೇಳಿದರು.
ಅತಿಕ್ರಮಣದಾರರು ಸಂಸದರನ್ನು ಗೌರವಿಸಿ, ಅಹವಾಲು ಸಲ್ಲಿಸಿದರು. ಬಿಜೆಪಿ ಮಂಡಳಾಧ್ಯಕ್ಷ ಪ್ರಸಾದ ಹೆಗಡೆ, ಪ್ರಮುಖರಾದ ಪ್ರಮೋದ ಹೆಗಡೆ, ಹರಿಪ್ರಕಾಶ ಕೋಣೆಮನೆ, ಗಣಪತಿ ಬೋಳಗುಡ್ಡೆ, ಜಿ ಎನ್ ಗಾಂವ್ಕರ್, ವೆಂಕಟ್ರಮಣ ಬೆಳ್ಳಿ ಇತರರು ಇದ್ದರು.
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿದ ವಿಡಿಯೋ ಇಲ್ಲಿ ನೋಡಿ..
Discussion about this post