ಶಿರೂರು ಅಂಚಿನ ಗಂಗಾವಳಿ ನದಿ ಆಳದಲ್ಲಿರುವ ಮಣ್ಣು ಹಾಗೂ ಕಲ್ಲುಗಳನ್ನು ಹೊರ ತೆಗೆಯಲು ಕೇರಳದಿಂದ ವಿಶೇಷ ಯಂತ್ರ ಬರಲಿದೆ. ಆ ಯಂತ್ರವನ್ನು ವಿನ್ಯಾಸ ಮಾಡಿದ ಮಿತಿನ್ ಎಂಬಾತರು ಶಿರೂರಿಗೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದ್ದು, ತಮ್ಮ ಯಂತ್ರದಿoದ ನದಿ ಆಳದ ಮಣ್ಣನ್ನು ತೆಗೆಯಲು ಸಾಧ್ಯ ಎಂದು ಹೇಳಿದ್ದಾರೆ.
`ಆ ಯಂತ್ರ ಬೋಟ್ ಆಕಾರದಲ್ಲಿದ್ದು, ನೋಡಲು ಚಿಕ್ಕದು. ಆದರೆ, ಅದರ ಕೆಲಸ ಅತಿ ದೊಡ್ಡದು’ ಎಂದು ಶಾಸಕ ಸತೀಶ್ ಸೈಲ್ ಹೇಳಿದರು. `ನದಿ ಆಳದಲ್ಲಿ ಗಟ್ಟಿಯಾದ ಮಣ್ಣನ್ನು ಆ ಯಂತ್ರ ಸಡಿಲ ಮಾಡಲಿದೆ. ಅಡ್ಡಕ್ಕೆ ಸಿಲುಕಿರುವ ಆಲದ ಮರ ತೆಗೆಯುವ ನೇರವಾಗಿಸಿ, ವೈರ್ ಬಳಸಿ ತೆಗೆಯುವ ಪ್ರಯತ್ನ ನಡೆಯುತ್ತದೆ’ ಎಂದು ಸತೀಶ್ ಸೈಲ್ ತಿಳಿಸಿದರು. `ಕಲ್ಲುಮಿಶ್ರಿತ ಮಣ್ಣು ತೆಗೆಯಲು ಸಬ್‌ಮರ್ಸಿಬಲ್ ಪಂಪ್ ಬಳಸಲಾಗುತ್ತದೆ’ ಎಂದರು.
ಶಿರೂರಿನಲ್ಲಿ ಸತೀಶ್ ಸೈಲ್ ಮಾತನಾಡಿದ ವಿಡಿಯೋ ಇಲ್ಲಿ ನೋಡಿ..





Discussion about this post