6 Skip to content

ಶಿರೂರು ಗುಡ್ಡ: ವಾಹನ ಸಂಚಾರಕ್ಕೆ ಹಲವು ನಿಯಮ!

ಶಿರೂರು ಗುಡ್ಡ ಕುಸಿತವಾದ ನಂತರ ಸಾಕಷ್ಟು ಮುನ್ನಚ್ಚರಿಕೆವಹಿಸಿರುವ ಜಿಲ್ಲಾಡಳಿತ ಆ ಭಾಗದಲ್ಲಿ ವಾಹನ ಸಂಚಾರಕ್ಕೆ ಅನುಮತಿ ನೀಡಲಿದ್ದು, ಹಲವು ನಿಯಮಗಳನ್ನು ಜಾರಿಗೊಳಿಸಿದೆ.
ಗೋವಾದಿಂದ ಕುಂದಾಪುರದವರೆಗೂ ತಜ್ಞರು ಹೆದ್ದಾರಿ ಅಂಚಿನ ಪ್ರದೇಶವನ್ನು ಪರಿಶೀಲಿಸಿ ಗುಡ್ಡ ಕುಸಿತ ಸಾಧ್ಯತೆಗಳಿರುವ ಜಾಗವನ್ನು ಪಟ್ಟಿ ಮಾಡಿದ್ದಾರೆ. ಅಲ್ಲಿ ಸಹ ಮುನ್ನಚ್ಚರಿಕೆವಹಿಸಲು ಜಿಲ್ಲಾಡಳಿತ ತಯಾರಿ ನಡೆಸಿದೆ. ಪ್ರಸ್ತುತ ಶಿರೂರಿನಲ್ಲಿ ಸಿಬ್ಬಂದಿ ಕಣ್ಗಾವಲು ಇರಿಸಿ ವಾಹನ ಓಡಾಟಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಈ ಭಾಗದಲ್ಲಿ 20ಕಿಮೀ ವೇಗದಲ್ಲಿ ವಾಹನ ಓಡಿಸಲು ನಿರ್ಣಯಿಸಲಾಗಿದ್ದು, ನಿಯಮ ಮೀರದಂತೆ ಸೂಚಿಸಲಾಗಿದೆ.
ತಜ್ಞರ ಅಭಿಪ್ರಾಯದಂತೆ ಗುಡ್ಡದ ನೀರು ಬೇರೆ ಬೇರೆ ಕಡೆ ಹರಿದು ಹೋಗುವಂತೆ ಮಾಡುವ ಚಿಂತನೆಯಿದೆ. ಸ್ಥಳದಲ್ಲಿರುವ ಸಿಬ್ಬಂದಿ ಮತ್ತೆ ಗುಡ್ಡ ಕುಸಿತದ ಅಪಾಯದ ಮುನ್ಸೂಚನೆ ದೊರೆತ ತಕ್ಷಣ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು. ಅಲ್ಲಿ ವಾಹನ ಸಂಚಾರ ತಡೆಹಿಡಿಯಬೇಕು ಎಂದು ಸೂಚಿಸಲಾಗಿದೆ. ಇದರೊಂದಿಗೆ ಗುಡ್ಡ ಕುಸಿತದ ಅಪಾಯವಿರುವ 429 ಕಡೆ ಕಟ್ಟೆಚ್ಚರವಹಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಹೇಳಿದ್ದಾರೆ.
ಹೆದ್ದಾರಿ ಸಂಚಾರದ ಬಗ್ಗೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಹೇಳಿದ್ದೇನು? ವಿಡಿಯೋ ನೋಡಿ..

Leave a comment

Leave a Reply

You cannot copy content of this page