ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಮಿರ್ಜಾನ್ ಬಳಿ ನೀರಿನ ಪ್ರವಾಹದಿಂದಾಗಿ ರೈಲ್ವೆ ಮಾರ್ಗ ಕುಸಿತ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದು ಸತ್ಯವಲ್ಲ.
ಈ ಬಗ್ಗೆ ಜಿಲ್ಲಾ ಪೊಲೀಸ್ ಪ್ರಕಟಣೆ ನೀಡಿದ್ದು `ಈ ರೀತಿ ಯಾವುದೇ ವಿದ್ಯಮಾನ ನಡೆದಿಲ್ಲ’ ಎಂದು ಸ್ಪಷ್ಟಪಡಿಸಿದೆ. ಸುಳ್ಳು ಸುದ್ದಿ ಹರಡುವವರಿಂದ ಸಮಾಜದ ಸ್ವಾಸ್ಥö್ಯ ಹಾಳಾಗುತ್ತಿದ್ದು, ಜನ ಆತಂಕಕ್ಕೆ ಒಳಗಾಗುತ್ತಿದ್ದಾರೆ. ಸುಳ್ಳು ಸುದ್ದಿಗಳಿಂದ ಕೋಮು ಗಲಭೆಗಳು ಸಹ ನಡೆದ ಉದಾಹರಣೆಗಳಿವೆ. ಹೀಗಾಗಿ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
`ಸುಳ್ಳು ಸುದ್ದಿ ಡಿಲಿಟ್ ಮಾಡಿ, ಸತ್ಯವನ್ನು ಶೇರ್ ಮಾಡಿ’




Discussion about this post