ತಟ್ಟಿಹಳ್ಳ ಅಣೆಕಟ್ಟಿನಿಂದ ನೀರು ಹೊರಬಿಡುವ ಬಗ್ಗೆ ಮುನ್ಸೂಚನೆ ನೀಡುವಂತೆ ತಿಳಿಸಿದ್ದರೂ ಅದನ್ನು ಪಾಲಿಸದ ಅಣೆಕಟ್ಟು ಅಧಿಕಾರಿಗಳು ಏಕಾಏಕಿ ನೀರು ಹೊರಬಿಡುವ ಮೂಲಕ ಉದ್ದಟತನ ಮೆರೆದಿದ್ದಾರೆ.
ಅಗಷ್ಟ 1ರಂದು ಯಾವುದೇ ಎಚ್ಚರಿಕೆಯನ್ನು ನೀಡದೇ ಅಣೆಕಟ್ಟಿನಿಂದ 20 ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗಿದೆ. ತಕ್ಷಣ ಮಾಹಿತಿ ಪಡೆದ ತಹಶೀಲ್ದಾರ್ ಅಶೋಕ ಭಟ್ಟ ಅಲ್ಲಿಗೆ ತಮ್ಮ ಅಧೀನ ಅಧಿಕಾರಿಗಳನ್ನು ಕಳುಹಿಸಿ ಜನರನ್ನು ರಕ್ಷಿಸುವ ಕೆಲಸ ಮಾಡಿದರು. ನಂತರ ತಾವೇ ತೆರಳಿ ಪರಿಸ್ಥಿತಿ ಅವಲೋಕಿಸಿದರು. ಈ ವೇಳೆ ಕೆಲವರು ಅಲ್ಲಿ ಮೀನು ಹಿಡಿಯುತ್ತಿದ್ದು, ಅವರನ್ನು ಸುರಕ್ಷಿತವಾಗಿ ದಡಕ್ಕೆ ಕರೆತರಲಾಯಿತು. 15ಕ್ಕೂ ಅಧಿಕ ಮೀನುಗಾರರು ಅಲ್ಲಿದ್ದು, ಯಾರೂ ಸ್ಥಳೀಯರಾಗಿರಲಿಲ್ಲ.ವಿದ್ಯುತ್ ನಿಗಮದ ಅಧಿಕಾರಿಗಳ ನಡೆಗೆ ಆಕ್ರೋಶ ವ್ಯಕ್ತವಾಗಿದೆ.
ತಟ್ಟಿಹಳ್ಳದಿಂದ ಏಕಾಏಕಿ ನೀರು ಬಿಟ್ಟ ದೃಶ್ಯಾವಳಿಗಳನ್ನು ಇಲ್ಲಿ ನೋಡಿ..
Discussion about this post