ಜರ್ಮನಿಯ ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗಾಗಿ `ಟಾಲೆಂಟ್ ಆರೆಂಜ್’ ಸಂಸ್ಥೆ ಅವಕಾಶ ಮಾಡಿಕೊಟ್ಟಿದ್ದು, ಅಲ್ಲಿ ಕೆಲಸ ಮಾಡಲು ಆಸಕ್ತಿ ಇರುವವರಿಗಾಗಿ ಹುಡುಕಾಟ ನಡೆದಿದೆ.
ಜರ್ಮನಿಯಲ್ಲಿ ಕೆಲಸ ನಿರ್ವಹಿಸಲು ಉತ್ಸುಕವಾದ ಅಭ್ಯರ್ಥಿಗಳಿಗೆ ಕೇರಳದ ತಿರುವನಂತಪುರದ ತರಬೇತಿ ಕೇಂದ್ರದಲ್ಲಿ 8 ತಿಂಗಳ ಕಾಲ ಜರ್ಮನ್ ಭಾಷೆ ಬಗ್ಗೆ ತರಬೇತಿ ನೀಡಲಾಗುತ್ತದೆ. ತರಬೇತಿಯೊಂದಿಗೆ ಊಟ ಮತ್ತು ವಸತಿ ಸೌಲಭ್ಯ ಕಲ್ಪಿಸಲಾಗುತ್ತದೆ. ಬಿ.ಎಸ್ಸಿ(ನರ್ಸಿಂಗ್), ಬಿ.ಎಸ್ಸಿ/ಜಿ.ಎನ್.ಎಮ್ ವಿದ್ಯಾರ್ಹತೆ ಪಡೆದಿರುವ 38 ವರ್ಷದ ಒಳಗಿನ ಪುರುಷ ಅಥವಾ ಮಹಿಳೆ ಯಾರೂ ಬೇಕಾದರೂ ತರಬೇತಿಗೆ ಬರಬಹುದು. ಚಿಕ್ಕ ಮಕ್ಕಳನ್ನು ತಮ್ಮೊಂದಿಗೆ ಕರೆದೊಯ್ಯಲು ಅವಕಾಶವಿಲ್ಲ. ಭಾರತೀಯ ನರ್ಸಿಂಗ್ ಲೈಸನ್ಸ್ ಕಡ್ಡಾಯ. ಮಾಹಿತಿಗೆ ನಿಮ್ಮ ಸಮೀಪದ ಕಾರ್ಮಿಕ ಕಚೇರಿಯನ್ನು ಸಂಪರ್ಕಿಸಿ.




Discussion about this post